Thursday, August 6, 2026

BDA Apartments

Home Front Page ಹಿಂದೂ ಆದ ಮೇಲೆ ಹಿಂದುತ್ವ ಗೌರವಿಸಲೇಬೇಕು- ಸಿದ‍್ಧರಾಮಯ್ಯಗೆ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿರುಗೇಟು.

ಹಿಂದೂ ಆದ ಮೇಲೆ ಹಿಂದುತ್ವ ಗೌರವಿಸಲೇಬೇಕು- ಸಿದ‍್ಧರಾಮಯ್ಯಗೆ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿರುಗೇಟು.

ಬಾಗಲಕೋಟೆ,ಫೆಬ್ರವರಿ,7,2023(www.justkannada.in):  ನಾನು ಹಿಂದೂ ವಿರೋಧಿಯಲ್ಲ. ಆದರೆ ಹಿಂದುತ್ವ ವಿರೋಧಿ. ನಾನೂ ಕೂಡ ಹಿಂದೂ ಎಂದು ಹೇಳಿಕೆ ನೀಡಿದ್ಧ ಮಾಜಿ ಸಿಎಂ ಸಿದ್ಧರಾಮಯ್ಯಗೆ  ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ತಿರುಗೇಟು ನೀಡಿದ್ದಾರೆ.

 ಈ ಕುರಿತು ಮಾತನಾಡಿರುವ ಅವರು, ನಾನು ಹಿಂದೂ ಅಂದ ಮೇಲೆ ಹಿಂದುತ್ವವನ್ನು ಗೌರವಿಸಲೇಬೇಕು. ಸಿದ್ದರಾಮಯ್ಯ ಅವರ ದ್ವಂದ್ವ ಹೇಳಿಕೆಯಲ್ಲಿ ಅರ್ಥವಿಲ್ಲ. ಹಿಂದುತ್ವ ವಿಚಾರದಲ್ಲಿ ಅವರಿಗೆ ಸ್ವಲ್ಪ ಭೇದ ಇರಬಹುದು. ಆದರೆ ನಾನು ಹಿಂದೂ ಅಂದಮೇಲೆ ಹಿಂದುತ್ವವನ್ನು ಗೌರವಿಸಲೇಬೇಕು. ಹಿಂದುಗಳಲ್ಲಿ ಇರುವಂತಹದ್ದು ಹಿಂದುತ್ವ. ಹೀಗಾಗಿ ಹಿಂದೂಗಳೆಲ್ಲರೂ ಹಿಂದುತ್ವವನ್ನು ಗೌರವಿಸಲೇಬೇಕು ಎಂದು ಹೇಳಿದರು.

ಯಾವ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರು ಆ ಭಾವನೆಯನ್ನ ಹೇಳುತ್ತಾರೆ ಗೊತ್ತಿಲ್ಲ. ಹಿಂದುತ್ವ ವಿಚಾರದಲ್ಲಿ ಅವರಿಗೆ ಸ್ವಲ್ಪ ಬೇಧ ಇರಬಹುದು. ಆದರೆ ಹಿಂದೂಗಳೆಲ್ಲರೂ ಹಿಂದುತ್ವವನ್ನ ಆಧರಿಸಲೇಬೇಕು. ಹಿಂದುಗಳಲ್ಲಿ ಇರುವಂತಹದ್ದು ಹಿಂದುತ್ವ. ಸಿದ್ದರಾಮಯ್ಯ ಅವರಿಗೆ ಯಾವುದಾದರೂ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಅವರು ವಿಚಾರ ವಿನಿಮಯ ಮಾಡಿಕೊಂಡು ಪರಿಸಿಕೊಳ್ಳುವುದು ಉತ್ತಮ. ಅದುಬಿಟ್ಟು ಹಿಂದೂ ಎಂದು ಹೇಳುತ್ತಾ ಹಿಂದುತ್ವ ವಿರೋಧಿಸುತ್ತೇನೆ ಅನ್ನೋದು ಅರ್ಥಹೀನವಾಗಿದೆ ಎಂದು ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ತಿಳಿಸಿದರು.

Key words: Hinduism – Hindu- Subudhendra Tirtha Swamiji – Siddaramaiah.