ಪಾರ್ಟಿ ನೆಪದಲ್ಲಿ ಯುವತಿ ಕರೆಸಿಕೊಂಡು ಅತ್ಯಾಚಾರಕ್ಕೆ ಯತ್ನ: ಇಬ್ಬರ ಬಂಧನ.

ಬೆಂಗಳೂರು,ಫೆಬ್ರವರಿ,7,2023(www.justkannada.in):  ಪಾರ್ಟಿ ನೆಪದಲ್ಲಿ ಯುವತಿಯರನ್ನ ಕರೆಸಿಕೊಂಡು ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಇಬ್ಬರನ್ನ ಬೆಂಗಳೂರಿನ ವಿವೇಕನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ 5 ರಂದು ಪಾರ್ಟಿ ನೆಪದಲ್ಲಿ ಆರೋಪಿಗಳು ಪರಿಚಯಸ್ತ ಯುವತಿಯರನ್ನಕರೆಸಿಕೊಂಡಿದ್ದರು ಅಂದು ಮಧ್ಯರಾತ್ರಿ 2.30ರವರೆಗೆ ಎಣ್ಣೆ ಪಾರ್ಟಿ ಮಾಡಿದ್ದರು. ಬಳಿಕ ನಶೆಯಲ್ಲಿದ್ದ ಜಮ್ಮು ಕಾಶ್ಮೀರ ಮೂಲದ ಯುವತಿ ಮೇಲೆ ಇಬ್ಬರು ಆರೋಪಿಗಳು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.

ಮತ್ತೊರ್ವ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಯುವತಿ ತಪ್ಪಿಸಿಕೊಂಡು ಹೋಗಿ ಬಾತ್​ ರೂಮ್​​ನಲ್ಲಿ ಲಾಕ್ ಮಾಡಿಕೊಂಡು ಅಡಗಿಕೊಂಡಿದ್ದಾಳೆ. ಬಳಿಕ ಮರುದಿನ ಕೋರಮಂಗಲ ಠಾಣೆಗೆ ತೆರಳಿ ಯುವತಿ ಮಾಹಿತಿ ನೀಡಿ ದೂರು ದಾಖಲಿಸಿದ್ದಾಳೆ. ಇದೀಗ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: woman – rape –party-two- arrested-Bangalore