ಬಿಎಂಎಸ್ ಹಗರಣದ ರುವಾರಿ ಜೊತೆ ಸಚಿವ ಅಶ್ವಥ್ ನಾರಾಯಣ್- ಫೋಟೋ ಬಿಡುಗಡೆ ಮಾಡಿ ಹೆಚ್.ಡಿಕೆ ವಾಗ್ದಾಳಿ.

ಬೆಂಗಳೂರು,ಫೆಬ್ರವರಿ,7,2023(www.justkannada.in):  ಬ್ರಾಹ್ಮಣ ಸಮುದಾಯ ಹೇಳಿಕೆ ಕುರಿತು ತಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ಧ ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಬಿಎಂಎಸ್ ಹಗರಣದ ರುವಾರಿ ಜೊತೆ ಸಚಿವ ಅಶ್ವಥ್ ನಾರಾಯಣ್ ಊಟ ಮಾಡುತ್ತಿರುವ ಫೋಟೋವನ್ನ ಬಿಡುಗಡೆ ಮಾಡಿ ವಾಗ್ದಾಳಿ ನಡೆಸಿದರು.

ಬಿಎಂಎಸ್  ಅಕ್ರಮದ ರೂವಾರಿಗಳ ಜೊತೆ ಅಶ್ವಥ್ ನಾರಾಯಣ್ ಊಟ ಮಾಡುತ್ತಿದ್ದಾರೆ. ಈ ಮಹಾನುಭಾವ ಎಲ್ಲಿ ಕುಳಿತು ಬರೆದುಕೊಟ್ಟಿದ್ದಾನೆ ನೋಡಿಕೊಳ್ಳಿ.  ಇದರ ಬಗ್ಗೆ ಪ್ರಧಾನಿ ಮೋದಿ ಉತ್ತರ ಕೊಡುತ್ತಾರಾ..?

ಸಾರ್ವಜನಿಕರ ಹಣವನ್ನ ವೈಯಕ್ತಿಕ ಆಸ್ತಿ ಮಾಡುತ್ತಿದ್ದಾರೆ. ನನ್ನ ಸರ್ಕಾರ ಬರಲಿ ಎಂದು ನಾನು ಕಾಯುತ್ತಿದ್ದೇನೆ. ನನ್ನ ಸರ್ಕಾರ ಬಂದ್ರೆ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಹೆಚ್.ಡಿಕೆ ಹೇಳಿದರು.

ನಾನು ಯಾವತ್ತೂ ಜಾತಿ ರಾಜಕಾರಣಕ್ಕೆ ಪ್ರಾಶಸ್ತ್ಯ ನೀಡಿದವನಲ್ಲ. ಯಾವುದೇ ಸಮುದಾಯಕ್ಕೂ ನಾನು ಅವಮಾನ ಮಾಡಿಲ್ಲ ಈ ಬಗ್ಗೆ ಈಗಾಗಲೇ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಕರ್ನಾಟಕಕ್ಕೂ ವಿಡಿ ಸಾವರ್ಕರ್ ಗೂ ಸಂಬಂಧವೇನು..? ಕರ್ನಾಟಕಕ್ಕೂ ಗೂಡ್ಸೆಗೂ ಸಂಬಂಧವೇನು..? ಇವರೆಲ್ಲಾ ಮಹಾತ್ಮ ಗಾಂಧಿ ಹತ್ಯೆ ಮಾಡಿ ರಾಜ್ಯಕ್ಕೆ ಬಂದಿದ್ದಾರೆ.  ಭಯದಿಂದ ನಮ್ಮ ರಾಜ್ಯಕ್ಕೆ ಬಂದಿದ್ದಾರೆ. ಜೋಶಿ ಸಿಎಂ ಆಗಬಾರದು ಅಂತಾ ನಾನು ಹೇಳಿಲ್ಲ ಎಂದರು.

ಇದೇ ವೇಳೆ ಶಾಸಕ ಸಿ.ಟಿ ರವಿ ವಿರುದ್ದವೂ ಕಿಡಿಕಾರಿದ ಹೆಚ್.ಡಿಕೆ, ಶಿಕ್ಷಕರೊಬ್ಬರು ಕೆಆರ್ ಎಸ್ ನಲ್ಲಿ ಬಿದ್ದು ಸತ್ತಿದ್ದೇಕೆ..? ನಿಮ್ಮ ಹಾಗೆ ಕಳ್ಳ ವ್ಯವಹಾರ ಮಾಡುವವನಲ್ಲ . ಸಿಟಿ ರವಿ ಇತಿಹಾಸದ ಬಗ್ಗೆ ಇಡಿ ರಾಜ್ಯಕ್ಕೆ ಗೊತ್ತಿದೆ. ಸಿಟಿ ರವಿ ಏನು ಪತಿವ್ರತೆನಾ..? ಎಂದು ಗುಡುಗಿದರು.

Key words: Minister-Ashwath Narayan – BMS- scam –former CM- HD Kumaraswamy