ವಿದ್ಯುತ್ ತಂತಿ ಮೇಲಿದ್ದ ವಸ್ತು ತೆಗೆಯಲು ಹೋದಾಗ ಶಾಕ್ ಹೊಡೆದು ವ್ಯಕ್ತಿ ಸಾವು.

ಹಾಸನ,ನವೆಂಬರ್,2,2022(www.justkannada.in): ವಿದ್ಯುತ್ ತಂತಿ ಮೇಲಿದ್ದ ವಸ್ತು ತೆಗೆಯಲು ಹೋದಾಗ ಶಾಕ್ ಹೊಡೆದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನದ ಉದಯಗಿರಿ  ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಮಲ್ಲಪ್ಪ ಮೃತಪಟ್ಟ ವ್ಯಕ್ತಿ. ಮನೆ ಮುಂದೆ ಹಾದುಹೋಗಿದ್ದ ವಿದ್ಯುತ್ ತಂತಿ ಮೇಲೆ ಬಿದ್ದು ವಸ್ತು ತೆಗೆಯಲು ಮಲ್ಲಪ್ಪ ಮುಂದಾಗಿದ್ದಾರೆ.  ನೆಲ ಒರೆಸುವ ಮಾಪ್ ಬಳಸಿ ತಂತಿ ಮೇಲಿದ್ದ ವಸ್ತು ತೆಗೆಯಲು  ಮುಂದಾಗಿದ್ದು ಈ ವೇಳೆ ವಿದ್ಯುತ್ ಶಾಕ್  ಹೊಡೆದು ಮಲ್ಲಪ್ಪ ಸಾವನ್ನಪ್ಪಿದ್ದಾರೆ.

ಈ ದೃಶ್ಯ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ.  ಈ ಕುರಿತು  ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: electric wire- shock- person –death- Hassan