ಶಾಸಕ ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ: ಪೋಲಿಸರಿಂದ ಶೋಧ.

ದಾವಣಗೆರೆ, ನವೆಂಬರ್‌,2,2022(www.justkannada.in):  ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರನ ಪುತ್ರ ನಾಪತ್ತೆಯಾಗಿದ್ದು, ಪತ್ತೆಗೆ ಶೋಧ ತೀವ್ರಗೊಂಡಿದೆ.

ರೇಣುಕಾಚಾರ್ಯ ಅವರ ಸಹೋದರ ಪುತ್ರ ಚಂದ್ರ ಶೇಖರ್  ಭಾನುವಾರದಿಂದ ನಾಪತ್ತೆ ಆಗಿದ್ದು, ಇದುವರೆಗೆ ಮನೆಗೆ ಹಿಂದಿರುಗಿ ಬಂದಿಲ್ಲ. ಚಂದ್ರಶೇಖರ್ ಕಳೆದ ಭಾನುವಾರ ಶಿವಮೊಗ್ಗಕ್ಕೆ ವಿನಯ್ ಗುರೂಜಿ ಭೇಟಿಯಾಗಲು ತೆರಳಿದ್ದರು.  ವಿನಯ್ ಗುರೂಜಿ ಭೇಟಿಯಾದ ನಂತರ ಶಿವಮೊಗ್ಗದಿಂದ ಹೊನ್ನಾಳಿಗೆ ಚಂದ್ರಶೇಖರ್ ಹೊರಟಿದ್ದು ಈ ವೇಳೆ ಕಾರು ಸಮೇತ ಕಾಣೆಯಾಗಿದ್ದಾರೆ. ಚಂದ್ರಶೇಖರ್ ಫೋನ್ ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿದೆ.

ಪೊಲೀಸರು ಶೋಧಕಾರ್ಯವನ್ನು ತೀವ್ರಗೊಳಿಸಿದ್ದು ದಾವಣಗೆರೆ ಶಿವಮೊಗ್ಗ, ಚಿತ್ರದುರ್ಗದಲ್ಲಿ  ಶೋಧಕಾರ್ಯ ನಡೆಸುತ್ತಿದ್ದಾರೆ.

ಇನ್ನು ಸಹೋದರನ ಪುತ್ರನನ್ನ ನೆನೆದು ಶಾಸಕ ಎಂ.ಪಿ ರೇಣುಕಾಚಾರ್ಯ ಕಣ್ಣೀರಿಟ್ಟಿದ್ದಾರೆ. ಕಳೆದವಾರ ನನ್ನ ಮಕ್ಕಳ ಜೊತೆ ಟ್ರಿಪ್ ಗೆ ಪ್ಲಾನ್ ಮಾಡಿದ್ದ. ಜನತೆಗೆ ಕಷ್ಟ ಎಂದಾಗ ಸಹಾಯಕ್ಕೆ ನಿಲ್ಲುತ್ತಿದ್ದ.  ಎಲ್ಲರೂ ಕರೆ ಮಾಡಿ ಧೈರ್ಯ ತುಂಬುತ್ತಿದ್ದಾರೆ.  ನಾಯಕರು ಜನತೆ ನಮ್ಮ ಜತೆಗಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

Key words:  MLA -MP Renukacharya’s- brother’s -son – missing.