ಹೆಚ್.ಡಿಕೆ, ಹೆಚ್.ಡಿಡಿ ಮತ್ತು ಮೋದಿ  ಅವರ ಸಾಧನೆ ಮೇಲೆ ಚುನಾವಣೆಯಾಗಲಿ-ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್

ಬೆಂಗಳೂರು,ಮಾರ್ಚ್,14,2024(www.justkannada.in):  ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ತಾವು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಹಿನ್ನೆಲೆ ಈ ಕುರಿತು ಮಾತನಾಡಿರುವ ಡಾ.ಸಿ.ಎನ್ ಮಂಜುನಾಥ್,  ನಾನು ಬಿಜೆಪಿ ಜೆಡಿಎಸ್  ಮೈತ್ರಿ ಅಭ್ಯರ್ಥಿಯಾಗಿದ್ದೇನೆ ನಿಮ್ಮ ಸಹಕಾರ ಇರಲಿ ಎಂದು ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಡಾ.ಸಿ.ಎನ್ ಮಂಜುನಾಥ್, ನಾವು ಯಾರನ್ನೂ ಟೀಕೆ ಮಾಡುವುದಿಲ್ಲ. ಹೆಚ್.ಡಿ ಕುಮಾರಸ್ವಾಮಿ, ಹೆಚ್.ಡಿ ದೇವೇಗೌಡ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಮೇಲೆ ಚುನಾವಣೆಯಾಗಲಿ. ಸಾಧನೆ ಮಾತನಾಡಬೇಕು ಮಾತು ಸಾಧನೆ  ಆಗಬಾರದು ಎಂದರು.

ಈ ಚುನಾವಣೆಯಲ್ಲಿ ನಾವು ಗಂಭೀರವಾಗಿ ಪರಿಗಣಿಸಬೇಕು ಎಂದು ಡಾ.ಸಿಎನ್ ಮಂಜುನಾಥ್. ತಿಳಿಸಿದರು.

Key words: elections-achievements – HDK- HD Devegowda-Modi – alliance candidate -Dr. CN Manjunath