Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Crime ಚುನಾವಣೆಗೆ ಹಂಚಲು ಸಂಗ್ರಹಿಸಿದ್ದ ಸೀರೆ ವಶಕ್ಕೆ ಪಡೆದ ವಿಚಾರ: ಬಿಜೆಪಿ ವಿರುದ್ದ ಕಾಂಗ್ರೆಸ್ ದೂರು…

ಚುನಾವಣೆಗೆ ಹಂಚಲು ಸಂಗ್ರಹಿಸಿದ್ದ ಸೀರೆ ವಶಕ್ಕೆ ಪಡೆದ ವಿಚಾರ: ಬಿಜೆಪಿ ವಿರುದ್ದ ಕಾಂಗ್ರೆಸ್ ದೂರು…

ಮೈಸೂರು,ನ,16,2019(www.justkannada.in): ರಾಜ್ಯದ 15 ಕ್ಷೇತ್ರಗಳ ಉಪಚುನಾವಣಾ ಕಣ ರಂಗೇರಿದ್ದು ಈ ನಡುವೆ ಚುನಾವಣೆಗೆ ಹಂಚಲು ಮೈಸೂರಿನ ವಿಜಯನಗರದ ಬಳಿ ಸಂಗ್ರಹಿಸಿಡಲಾಗಿದ್ದ ಸೀರೆಯನ್ನ ವಶಕ್ಕೆ ಪಡೆದ ಹಿನ್ನೆಲೆ ಬಿಜೆಪಿ ವಿರುದ್ದ ಕಾಂಗ್ರೆಸ್ ದೂರು ನೀಡಿದೆ.

ಬಿಜೆಪಿ ವಿರುದ್ಧ ಎಸಿ ಡಾ.ವೆಂಕಟರಾಜುಗೆ ದಾಖಲೆಗಳ ಸಮೇತ ಕಾಂಗ್ರೆಸ್ ನಿಯೋಗ ದೂರು ನೀಡಿದೆ. ಬಿಜೆಪಿಯಿಂದ ಹುಣಸೂರು ಉಪ ಚುನಾವಣೆಗಾಗಿ ಹಂಚಲು ತಂದಿದ್ದ  30,000 ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಸೀರೆ ಚೀಲಗಳ ಮೇಲೆ ಯೋಗೇಶ್ವರ್ ಹಾಗೂ ಬಿಜೆಪಿ ನಾಯಕರ ಫೋಟೊಗಳಿವೆ. ಆದರೆ ವಿಜಯನಗರದ ಗಂಗಣ್ಣ ಎಂಬುವವರ ಮೇಲೆ ಎಫ್ ಐಆರ್ ದಾಖಲಾಗಿದೆ. ಹೀಗಾಗಿ ಅಧಿಕಾರಿಗಳು ಸಹ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಚುನಾವಣಾ ಆಯೋಗ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸುವ ಬಗ್ಗೆ ಅನುಮಾನವಿದೆ ಎಂದು ಕಾಂಗ್ರೆಸ್ ಶಂಕೆ ವ್ಯಕ್ತಪಡಿಸಿ ದೂರು ನೀಡಿದೆ.

ಜತೆಗೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹುಣಸೂರನ್ನು ಜಿಲ್ಲೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಇದೂ ಕೂಡಾ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ.  ಈ ವಿಚಾರವಾಗಿ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ  ಬಿಜೆಪಿ ವಿರುದ್ದ ಎಸಿ ವೆಂಕಟರಾಜು ಅವರಿಗೆ ಕಾಂಗ್ರೆಸ್ ನಿಯೋಗ ದೂರು ಸಲ್ಲಿಕೆ ಮಾಡಿದೆ.

Key words: election – Saree- Seize- Congress-  complaint – against – BJP-mysore