Thursday, August 13, 2026

BDA Apartments

Home Front Page ಕಳೆದ ಬಾರಿ ನಾನು ಗೆಲ್ಲಲು ಬಿಜೆಪಿ ಸಹಕಾರ ನೀಡಿತ್ತು ಎಂದ ಅನರ್ಹ ಶಾಸಕ ಕೆ.ಸಿ ನಾರಾಯಣಗೌಡ..

ಕಳೆದ ಬಾರಿ ನಾನು ಗೆಲ್ಲಲು ಬಿಜೆಪಿ ಸಹಕಾರ ನೀಡಿತ್ತು ಎಂದ ಅನರ್ಹ ಶಾಸಕ ಕೆ.ಸಿ ನಾರಾಯಣಗೌಡ..

ಕೆ.ಆರ್ ಪೇಟೆ,ನ,16,2019(www.justkannada.in): ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಗೆಲ್ಲಲು ಬಿಜೆಪಿ ಸಹಕಾರ ನೀಡಿತ್ತು ಎಂದು ಅನರ್ಹ ಶಾಸಕ ಕೆ.ಸಿ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ.

ಉಪಚುನಾವಣೆಯಲ್ಲಿ ಕೆ.ಆರ್ ಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಅನರ್ಹ ಶಾಸಕ ಕೆ.ಸಿ ನಾರಾಯಣಗೌಡ ಸಜ್ಜಾಗಿದ್ದಾರೆ. ಈ ನಡುವೆ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೆ.ಸಿ ನಾರಾಯಣಗೌಡ,, ಕಳೆದ ಬಾರಿ ಬಿಜೆಪಿ ಸಹಕಾರದಿಂದ ಶಾಸಕನಾಗಿ ಆಯ್ಕೆಯಾಗಿದ್ದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಹೊಂದಾಣಿಕೆಯಾಗಿತ್ತು. ನಮ್ಮ ಕ್ಷೇತ್ರಕ್ಕೆ ಯಡಿಯೂರಪ್ಪ ಬಂದು ಪ್ರಚಾರವನ್ನೇ ಮಾಡಿರಲಿಲ್ಲ . ಕಳೆದ ಬಾರಿ ನಾನು ಗೆಲ್ಲೋದಕ್ಕೆ ಬಿಜೆಪಿ ಸಹಕಾರ ಇತ್ತು. ನೇರವಾಗಿ ಹೊಂದಾಣಿಕೆ ಆಗಿರಲಿಲ್ಲ. ಆದರೆ ಪರೋಕ್ಷವಾಗಿ ಆಗಿತ್ತು ಎಂದು ತಮ್ಮ ಗೆಲುವಿನ ರಹಸ್ಯ ಬಿಚ್ಚಿಟ್ಟಿದ್ದಾರೆ.

ಹಲವು ಕ್ಷೇತ್ರದಲ್ಲಿ ಬಿಜೆಪಿ ಸರಿಯಾಗಿ ಪ್ರಚಾರವೇ ಮಾಡ್ಲಿಲ್ಲ. ನನಗಂತೂ ತುಂಬಾ ಜನ ಬಿಜೆಪಿ ಮುಖಂಡರು ಆಶೀರ್ವಾದ ಮಾಡಿದ್ರು. ನಾನು ಬಿಜೆಪಿ ಅಭ್ಯರ್ಥಿ ಮನೆಗೇ ಹೋಗಿ ಅವರ ತಂದೆ ಆಶೀರ್ವಾದ ಪಡೆದಿದ್ದೆ. ಕಳೆದ ಬಾರಿ ಗೆಲ್ಲೋದಕ್ಕೆ ಬಿಜೆಪಿಯೂ ಸಹಕಾರ ನೀಡಿತ್ತು ಎಂದು ನಾರಾಯಣಗೌಡ ತಿಳಿಸಿದ್ದಾರೆ.

Key words: last time – BJP-  support – my won- KC Narayana Gowda-KR pet