Tuesday, October 27, 2026

Dasara Wishes

Sting operation DasraWishes_JK DasraWishes JK
Happy Dasara
Home Front Page ಆಡಿಯೋ ವೈರಲ್: ಇದು ರಾಜಕೀಯ ಷಡ್ಯಂತ್ರ, ಕಿಡಿಗೇಡಿಗಳ ಕೃತ್ಯ- ಜಮೀರ್ ಸ್ಪಷ್ಟನೆ

ಆಡಿಯೋ ವೈರಲ್: ಇದು ರಾಜಕೀಯ ಷಡ್ಯಂತ್ರ, ಕಿಡಿಗೇಡಿಗಳ ಕೃತ್ಯ- ಜಮೀರ್ ಸ್ಪಷ್ಟನೆ

ಬೆಂಗಳೂರು,ಜೂನ್,1,2026 (www.justkannada.in):  ದಾವಣಗೆರೆ ದಕ್ಷಿಣ ವಿಧಾನಸಭೆ ಚುನಾವಣೆ ಸಂಬಂಧ ತಮ್ಮ ಆಡಿಯೋ ವೈರಲ್ ಆದ ಬಗ್ಗೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡರುವ ಜಮೀರ್ ಅಹ್ಮದ್ ಖಾನ್, ರಾಜ್ಯದ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನನ್ನ ಕುರಿತ ಆಡಿಯೋ ನಕಲಿ, ಎಐ ತಂತ್ರಜ್ಞಾನ ಬಳಸಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದೊಂದು ರಾಜಕೀಯ ಷಡ್ಯಂತ್ರ. ಇದು ಕಿಡಿಗೇಡಿಗಳ ಕೃತ್ಯ.  ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವವರ ವಿರುದ್ಧ ಸೈಬರ್ ಠಾಣೆಗೆ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆಡಿಯೋ ಬಗ್ಗೆ ಯಾವ ತನಿಖೆಗೆ ಬೇಕಾದರೂ ಒಳಪಡಿಸಲಿ. ನಾನು ಆ ರೀತಿ ಮಾತನಾಡಿಲ್ಲ. ಗೊಂದಲ ಉಂಟು ಮಾಡಲು ಇದೆಲ್ಲವೂ ಸೃಷ್ಟಿ ಮಾಡಲಾಗಿದೆ. ಇದು ಕಿಡಿಗೇಡಿಗಳ ಕೃತ್ಯ,ಇದನ್ನು ಯಾರೂ ನಂಬಬಾರದು ಎಂದು ಜಮೀರ್ ಮನವಿ ಮಾಡಿದ್ದಾರೆ.ಆಡಿಯೋ ವೈರಲ್: ಇದು ರಾಜಕೀಯ ಷಡ್ಯಂತ್ರ, ಕಿಡಿಗೇಡಿಗಳ ಕೃತ್ಯ- ಜಮೀರ್ ಸ್ಪಷ್ಟನೆ ...

Key words: Audio viral,  Jameer Ahamad Khan, clarifies