ಅಭಿನಂದನೆಗಳು : “ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್ಸ್ 2024” ಗೆ ವಿಟಿಯು ಆಯ್ಕೆ..!

The Economic Times, ET Education, Education Excellence Awards 2024, VTU

Congratulations! The Economic Times Education Toast to Your Success for your
winning at the Education Excellence Awards 2024

 

ಬೆಳಗಾವಿ, ಮೇ.31,2024: (www.justkannada.in news ) ಎಕನಾಮಿಕ್ ಟೈಮ್ಸ್ ಇಟಿ ಎಜುಕೇಷನ್ ನ “ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್ಸ್ 2024” ಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಆಯ್ಕೆಗೊಂಡಿದೆ.

ಈ ಸಂಬಂಧ ವಿಟಿಯುಗೆ ಮೇಲ್‌ ಮೂಲಕ ಅಧಿಕೃತ ಮಾಹಿತಿ ನೀಡಿರುವ ಎಕನಾಮಿಕ್‌ ಟೈಮ್ಸ್‌ ಸಂಸ್ಥೆ,  ಜೂನ್‌ 6  ಮತ್ತು 7 ರಂದು ದಿಲ್ಲಿಯ ಲೀಲಾ ಅಂಬಿಯನ್ಸ್‌ ಕನ್ವೆಂಷನ್‌ ಹೋಟೆಲ್‌ ನಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ತಿಳಿಸಿದೆ. ಅಂದು ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

ದೂರಶಿಕ್ಷಣ ಕಾರ್ಯಕ್ರಮಗಳಲ್ಲಿ ವಿಟಿಯುವಿನ , ದೂರ ಮತ್ತು ಆನ್ ಲೈನ್ ಶಿಕ್ಷಣ ಕೇಂದ್ರ ಉತ್ಕೃಷ್ಟತೆ ಸಾಧನೆ ಮಾಡಿರುವುದನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ʼ ಶಿಕ್ಷಣ ಶೃಂಗಸಭೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ 2024 ʼ ದಲ್ಲಿ ಭಾಗವಹಿಸುವಂತೆ ಅಧಿಕೃತ ಆಹ್ವಾನ ನೀಡಿದೆ.

ಕುಲಪತಿ ಸಂತಸ :

ಎಕನಾಮಿಕ್ ಟೈಮ್ಸ್ ಇಟಿ ಎಜುಕೇಷನ್ ನ “ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್ಸ್ 2024” ಗೆ ವಿಟಿಯು ಆಯ್ಕೆಗೊಂಡಿರುವುದಕ್ಕೆ ಕುಲಪತಿ ಪ್ರೊ.ವಿದ್ಯಾಶಂಕರ್‌ ಸಂತಸ ವ್ಯಕ್ತಪಡಿಸಿದರು.

ತಾಂತ್ರಿಕ ವಿವಿಯಾಗಿರುವ ಹಿನ್ನೆಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆಗೆ ಮುಂದಾಗಿದ್ದೇವೆ. ಈ ನಿಟ್ಟಿನಲ್ಲಿ ಈಗಾಗಲೇ ಆನ್‌ ಲೈನ್‌ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಪರೀಕ್ಷೆ ಮುಗಿದ ಕೆಲವೇ ಕೆಲ ಗಂಟೆಗಳಲ್ಲಿ ಫಲಿತಾಂಶವನ್ನು ಸಹ ಪ್ರಕಟಿಸಿ ಹೊಸ ದಾಖಲೆ ಬರೆದಿದ್ದೇವೆ. ಇನ್ನು ಮುಂದೆ ಇದೇ ರೀತಿ ವಿಟಿಯು ತಾಂತ್ರಿಕ ಸಹಾಯದಿಂದ ಹಲವಾರು ನೂತನ ಯೋಜನೆಗಳನ್ನು ಜಾರಿಗೊಳಿಸಲಿದೆ ಎಂದರು.

Key words: The Economic Times, ET Education, Education Excellence Awards 2024, VTU

SUMMARY:

Congratulations: VTU selected for “Education Excellence Awards 2024″…!

The awards will be presented at a function to be held at The Leela Ambience Convention Hotel in Delhi on June 6 and 7. The programme will be held at 6 pm.

Being a technical university, we have taken the initiative to adopt state-of-the-art technologies. In this regard, we have already successfully completed the online examinations and also announced the results within a few hours of the completion of the exam. From now on, VTU will implement several new projects with technical assistance, he (Vice Chancelor Dr.Vidhyashankar ) added.