Sunday, September 6, 2026

BDA Apartments

Home Front Page ಎಸ್ ಐಟಿ ತನಿಖೆ ವೇಳೆ ಇಡಿ ದಾಳಿ ರಾಜಕೀಯ ಷಡ್ಯಂತ್ರ ಅನ್ನಿಸುತ್ತೆ-ಸಿಎಂ ಸಿದ್ದರಾಮಯ್ಯ

ಎಸ್ ಐಟಿ ತನಿಖೆ ವೇಳೆ ಇಡಿ ದಾಳಿ ರಾಜಕೀಯ ಷಡ್ಯಂತ್ರ ಅನ್ನಿಸುತ್ತೆ-ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜುಲೈ,12,2024 (www.justkannada.in):   ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಕುರಿತು ಎಸ್ ಐಟಿ ತನಿಖೆ ನಡೆಸುತ್ತಿರುವಾಗ ಇಡಿ ದಾಳಿ ನಡೆಸಿದ್ದು ರಾಜಕೀಯ ಷಡ್ಯಂತ್ರ ಅನ್ನಿಸುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಹಗರಣ ಸಂಬಂಧ ಮಾಜಿ ಸಚಿವ ಬಿ. ನಾಗೇಂದ್ರ ಬಂಧನ ವಿಚಾರ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹೇಳಿಕೆ ದಾಖಲಿಸಲು ಇಡಿಯವರು ಕರೆದೊಯ್ದಿದ್ದಾರೆ. ಬಿ. ನಾಗೇಂದ್ರ ಅರೆಸ್ಟ್ ಮಾಡಿರುವುದು ನನಗೆ ಗೊತ್ತಿಲ್ಲ. ವಶಕ್ಕೆ ಪಡೆದಿದ್ದು ಅಷ್ಟೆ ಗೊತ್ತು ಎಂದರು.

ವಾಲ್ಮೀಕಿ ಹಗರಣ ಸಂಬಂಧ ಎಸ್ ಐಟಿ ತನಿಖೆ ನಡೆಸುತ್ತಿದೆ. ಇದರ ಮೇಲೆ ಇಡಿ ತನಿಖೆ  ಮಾಡಲು ಹೊರಟಿದೆ ಇದು ರಾಜಕೀಯ ಷಡ್ಯಂತ್ರ ಎಂದು ಹೇಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: ED, SIT, investigation, CM Siddaramaiah