Thursday, September 17, 2026

BDA Apartments

2ನೇ ದಿನವೂ ಮುಡಾ ಕಚೇರಿಯಲ್ಲಿ ಮುಂದುವರೆದ ಇಡಿ ದಾಳಿ, ಪರಿಶೀಲನೆ BDA JK_Adv BDA Adv
Home Front Page 2ನೇ ದಿನವೂ ಮುಡಾ ಕಚೇರಿಯಲ್ಲಿ ಮುಂದುವರೆದ ಇಡಿ ದಾಳಿ, ಪರಿಶೀಲನೆ

2ನೇ ದಿನವೂ ಮುಡಾ ಕಚೇರಿಯಲ್ಲಿ ಮುಂದುವರೆದ ಇಡಿ ದಾಳಿ, ಪರಿಶೀಲನೆ

ಮೈಸೂರು,ಅಕ್ಟೋಬರ್,19,2024 (www.justkannada.in): ಮುಡಾ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಮುಡಾ ಕಚೇರಿ ಮೇಲೆ ಇಡಿ ಅಧಿಕಾರಿಗಳಿಂದ 2ನೇ ದಿನವಾದ ಇಂದು ದಾಳಿ, ಪರಿಶೀಲನೆ ಕಾರ್ಯ ಮುಂದುವರೆದಿದೆ.

ಮುಡಾ ಕಚೇರಿಯ ಮೇಲೆ 2ನೇ ದಿನವೂ ಇಡಿ ಅಧಿಕಾರಿಗಳ ವಿಚಾರಣೆ ಮುಂದುವರೆದಿದ್ದು, ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ವೈಟ್ನರ್ ಹಾಕಿದ್ದ ಮೂಲ ದಾಖಲಾತಿಯನ್ನ ಇಡಿ ಅಧಿಕಾರಿಗಳು ಶೋಧಿಸುತ್ತಿದ್ದು ಈ ಸಂಬಂಧ ಮುಡಾ ಆಯುಕ್ತ ರಘುನಂದನ್ ಅವರುವಿವರಣೆ ನೀಡಿದ್ದಾರೆ ಎನ್ನಲಾಗಿದೆ.  ಶೋಧ ವಟ್ನರ್ ಹಿಂದುರ

ಇನ್ನು ಭದ್ರತೆಗಾಗಿ ಮುಡಾ ಕಚೇರಿ ಬಳಿ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಈ ಮಧ್ಯೆ ಭೂ ಮಾಲೀಕ, ಪ್ರಕರಣದ 4ನೇ ಆರೋಪಿ ದೇವರಾಜು ಅವರ ಕೆಂಗೇರಿ ನಿವಾಸದ ಮೇಲೂ ನಿನ್ನೆ ಇಡಿ ದಾಳಿ ನಡೆಸಿತ್ತು.  ಮನೆಯಲ್ಲಿ ತಡರಾತ್ರಿವರೆಗೂ ಶೋಧಕಾರ್ಯ ನಡೆಸಿದ್ದು, ಜಮೀನು ಮಾರಿದ್ದ ಬಗ್ಗೆ ದೇವರಾಜುಗೆ ಇಡಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.  ನಿಮ್ಮ ಕುಟುಂಬಕ್ಕೆ ಜಮೀನು ಬಂದಿದ್ದೇಗೆ ನೀವು ಯಾವಾಗ ಜಮೀನು ಮಾರಾಟ ಮಾಡಿದ್ದು..? ಎಂಬ ಪ್ರಶ್ನೆಗಳನ್ನ ಕೇಳಿದ್ದಾರೆ ಎನ್ನಲಾಗಿದೆ.

Key words: ED, raid, inspection, continued, Muda office, 2nd day