Sunday, August 2, 2026

BDA Apartments

Home Front Page ಮೈಸೂರು ತಾಲ್ಲೂಕು ಕಚೇರಿಗೂ ಇಡಿ ಅಧಿಕಾರಿಗಳು ಲಗ್ಗೆ: ದಾಖಲೆ ಪರಿಶೀಲನೆ

ಮೈಸೂರು ತಾಲ್ಲೂಕು ಕಚೇರಿಗೂ ಇಡಿ ಅಧಿಕಾರಿಗಳು ಲಗ್ಗೆ: ದಾಖಲೆ ಪರಿಶೀಲನೆ

ಮೈಸೂರು,ಅಕ್ಟೋಬರ್,18,2024 (www.justkannada.in): ಮುಡಾ ಅಕ್ರಮ ಹಗರಣ ಸಂಬಂಧ ಮುಡಾ ಕಚೇರಿಗೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಇದೀಗ  ಮೈಸೂರು ತಾಲ್ಲೂಕು ಕಚೇರಿಗೂ ಲಗ್ಗೆ ಇಟ್ಟಿದ್ದಾರೆ.

ಹೌದು ಮೈಸೂರು ತಾಲ್ಲೂಕು ಕಚೇರಿಗೂ  ಇಡಿ ಅಧಿಕಾರಿಗಳು ಆಗಮಿಸಿ ದಾಖಲೆ ಶೋಧ ಮಾಡುತ್ತಿದ್ದಾರೆ. 4 ಇಡಿ ಅಧಿಕಾರಿಗಳು  ಪರಿಶೀಲನೆ ನಡೆಸುತ್ತಿದ್ದು, ಮೂಲ ಮಾಲೀಕ ದೇವರಾಜು ಕುಟುಂಬದ ಭೂ ದಾಖಲೆ ಕಲೆ ಹಾಕುತ್ತಿದ್ದಾರೆ.

ಹೊರಗೆ ಸಿಆರ್ ಪಿಎಫ್ ಭದ್ರತೆಯೊಂದಿಗೆ ತಹಸೀಲ್ದಾರ್ ಕೆ.ಎಂ ಮಹೇಶ್ ಕುಮಾರ್ ಕಚೇರಿಯಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಭದ್ರತಾ ಸಿಬ್ಬಂದಿಗೆ ಊಟ ತರಿಸಿ ಕೊಟ್ಟು  ತಹಶೀಲ್ದಾರ್ ಕಚೇರಿ ಒಳಗೆ ಕಡತಗಳ ಮೇಲೆ ಕಡತಗಳನ್ನು ತರಿಸಿಕೊಂಡು ಇಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.

Key words: ED Officers, Mysore Taluk Office, raind, Document