Sunday, August 16, 2026

BDA Apartments

Home Front Page ಟಿಪ್ಪು-ಸಾವರ್ಕರ್ ನಡುವಿನ ಎಲೆಕ್ಷನ್ ಎಂಬ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಡಿ.ಕೆ ಶಿವಕುಮಾರ್ ತಿರುಗೇಟು.

ಟಿಪ್ಪು-ಸಾವರ್ಕರ್ ನಡುವಿನ ಎಲೆಕ್ಷನ್ ಎಂಬ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಡಿ.ಕೆ ಶಿವಕುಮಾರ್ ತಿರುಗೇಟು.

ಬೆಂಗಳೂರು,ಫೆಬ್ರವರಿ,10,2023(www.justkannada.in): ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಬದಲಾಗಿ  ಸಾವರ್ಕರ್ ಮತ್ತು ಟಿಪ್ಪು ಸಿದ್ಧಾಂತದ ನಡುವೆ ನಡೆಯಲಿದೆ ಎಂದು ಹೇಳಿಕೆ ನೀಡಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ  ನಳೀನ್ ಕುಮಾರ್ ಕಟೀಲ್ ಗೆ  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್,  ನಳೀನ್ ಕುಮಾರ್ ಕಟೀಲ್ ಗೆ ಸರ್ಕಾರದ ಸಾಧನೆ ಬಗ್ಗೆ ಹೇಳಲು ಏನಿಲ್ಲ. ಹೀಗಾಗಿ ಟಿಪ್ಪು ಸಾವರ್ಕರ್ ಹೆಸರು ಹೇಳುತ್ತಿದ್ದಾರೆ. ನಾವು ಜನರ ಬದುಕಿನ ಬಗ್ಗೆ ಯೋಚಿಸುತ್ತೇವೆ. ಬ್ರಾಹ್ಮಣ ಸಿಎಂ ವಿಚಾರದ ಬಗ್ಗೆ ಮಾತನಾಡಲ್ಲ. ನಾವು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತೇವೆ . ಬಿಜೆಪಿಯವರು ಸಾಹುಕಾರ್ ಹೆಸರಾದರೂ ಹೇಳಲಿ ಸಾವರ್ಕರ್ ಹೆಸರಾದರೂ ಹೇಳಲಿ ಎಂದು ಕಿಡಿಕಾರಿದರು.

Key words: DK Shivakumar – Nalin Kumar Kateel- election – between -Tipu-Savarkar.