ಇಸ್ರೋದಿಂದ ಯಶಸ್ವಿ ಉಡಾವಣೆ: ಮೂರು ಉಪಗ್ರಹ ಹೊತ್ತು ನಭಕ್ಕೆ ಹಾರಿದ SSLV-D2 ರಾಕೆಟ್.

ಶ್ರೀಹರಿಕೋಟಾ,ಫೆಬ್ರವರಿ,10,2023(www.justkannada.in):  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಭಿನ್ನ ಪ್ರಯೋಗಗಳನ್ನು ಒಳಗೊಂಡಿರುವ ಮತ್ತು ನೂತನವಾಗಿ ಅಭಿವೃದ್ಧಿಪಡಿಸಲಾದ SSLV D2 ರಾಕೆಟ್ ಅನ್ನು ಯಶಸ್ವಿಯಾಗಿ ಉಡಾಯಿಸಿದೆ.

ಆಂಧ್ರದ ತಿರುಪತಿಯ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ 9:18ಕ್ಕೆ SSLV-D2 ರಾಕೆಟ್  ಉಡಾವಣೆ ಮಾಡಲಾಯಿತು. ಇಒಎಸ್-07, ಜೇನಸ್-1 ಮತ್ತು ಆಜಾದಿಸ್ಯಾಟ್-2 ಎಂಬ ಮೂರು ಉಪಗ್ರಹಗಳನ್ನು ಹೊತ್ತು ಎಸ್​ಎಸ್​ಎಲ್​ವಿ-ಡಿ2 ನಭಕ್ಕೆ ಹಾರಿದೆ.

ಭೂಮಿಯಿಂದ 450 ಕಿಮೀ ಎತ್ತರದ ಕಕ್ಷೆಯೊಂದರಲ್ಲಿ ಈ ಮೂರು ಉಪಗ್ರಹಗಳನ್ನು ಸೇರಿಸುವ ಕೆಲಸ ಈ ರಾಕೆಟ್​ ನದ್ದು. ಇಒಎಸ್-07 ಸೆಟಿಲೈಟ್ ಅನ್ನು ಇಸ್ರೋ ಸಂಸ್ಥೆಯೇ ತಯಾರಿಸಿದೆ. ಜೇನಸ್-1 ಸೆಟಿಲೈಟ್ ಅಮೆರಿಕದ ಅಂಟಾರಿಸ್ ಸಂಸ್ಥೆ ನಿರ್ಮಿಸಿದರೆ, ಚೆನ್ನನ ಸ್ಪೇಸ್ ಕಿಡ್ಸ್ ಸಂಸ್ಥೆಯು ಆಜಾದಿಸ್ಯಾಟ್-2 ಸೆಟಿಲೈಟನ್ನು ನಿರ್ಮಿಸಿದೆ.

Key words: Successful-launch – ISRO-SSLV-D2 -rocket – three satellites