Monday, August 10, 2026

BDA Apartments

Home Front Page ಕಾವೇರಿ ನೀರು ವಿಚಾರದಲ್ಲಿ ಡಿಕೆ ಶಿವಕುಮಾರ್ ನೇರವಾಗಿ ಕಳ್ಳತನ ಮಾಡುತ್ತಿದ್ದಾರೆ- ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ...

ಕಾವೇರಿ ನೀರು ವಿಚಾರದಲ್ಲಿ ಡಿಕೆ ಶಿವಕುಮಾರ್ ನೇರವಾಗಿ ಕಳ್ಳತನ ಮಾಡುತ್ತಿದ್ದಾರೆ- ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿ.

ಶಿವಮೊಗ್ಗ,ಸೆಪ್ಟಂಬರ್,20,2023(www.justkannada.in): ಡಿಸಿಎಂ ಡಿಕೆ ಶಿವಕುಮಾರ್ ಕಾವೇರಿ ನೀರು ವಿಚಾರದಲ್ಲಿ ನೇರವಾಗಿ ಕಳ್ಳತನ ಮಾಡುತ್ತಿದ್ದಾರೆ. ಈ ಮೂಲಕ ಇಂಡಿಯಾ ಒಕ್ಕೂಟವನ್ನ ತೃಪ್ತಿಪಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದರು.

ಕಾವೇರಿ ವಿವಾದ ವಿಚಾರವಾಗಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಡಿಕೆ ಶಿವಕುಮಾರ್ ಗೆ ಲೋಕಸಭೆ ಗೆಲ್ಲೋದು ಬಿಟ್ಟು ಬೇರೆನೂ ಬೇಕಿಲ್ಲ.   ಬಿಜೆಪಿ ಮತ್ತು ರೈತರು ಪ್ರತಿಭಟನೆ ನಡೆಸಿದ ಬಳಿ ನೀರು ಹರಿಸುವುದನ್ನ ನಿಲ್ಲಿಸಿದರು. ರಾಜ್ಯದ ರೈತರಿಗೆ ದ್ರೋಹ ಬಗೆದ ಮತ್ತೊಬ್ಬ ಡಿಸಿಎಂ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಸಿಎಂ ಸಿದ್ಧರಾಮಯ್ಯ ವಿರುದ್ಧವೂ ಗುಡುಗಿದ ಕೆ.ಎಸ್ ಈಶ್ವರಪ್ಪ, ಸಿದ್ದರಾಮಯ್ಯ ಸಿಎಂ ಆದ ಬಳಿಕ ಭ್ರಷ್ಟಾಚಾರ ತಾಂಡವಾಡುತ್ತಿದೆ.  ಎಲ್ಲಾ ಅಧಿಕಾರಿಯಿಂದಲೂ ಲಂಚ ಪಡೆಯುತ್ತಿದ್ದಾರೆ ಸಿದ್ಧರಾಮಯ್ಯನ ಮಗ ಯತೀಂದ್ರ ಲಂಚ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕರೇ ಈ ಕುರಿತು ಹೇಳಿದ್ದಾರೆ.  ಬೇಕಾದರೆ ಈ ಬಗ್ಗೆ ನಾನು ಸಾಕ್ಷಿ ಒದಗಿಸುತ್ತೇನೆ ಎಂದರು.

Key words: DK Shivakumar –directly- stealing – Cauvery water- issue – KS Eshwarappa.