Monday, September 28, 2026

BDA Apartments

ಕಾವೇರಿ ವಿವಾದ: ನಾಳೆ ಕೇಂದ್ರ ಸಚಿವರ ಭೇಟಿಗೆ ಸಮಯ ನಿಗದಿ-ಡಿಸಿಎಂ ಡಿ.ಕೆ ಶಿವಕು...
Home Front Page ಕಾವೇರಿ ವಿವಾದ: ನಾಳೆ ಕೇಂದ್ರ ಸಚಿವರ ಭೇಟಿಗೆ ಸಮಯ ನಿಗದಿ-ಡಿಸಿಎಂ ಡಿ.ಕೆ ಶಿವಕುಮಾರ್.

ಕಾವೇರಿ ವಿವಾದ: ನಾಳೆ ಕೇಂದ್ರ ಸಚಿವರ ಭೇಟಿಗೆ ಸಮಯ ನಿಗದಿ-ಡಿಸಿಎಂ ಡಿ.ಕೆ ಶಿವಕುಮಾರ್.

ನವದೆಹಲಿ,ಸೆಪ್ಟಂಬರ್,20,2023(www.justkannada.in):  ಕಾವೇರಿ ನದಿ ನೀರು ವಿವಾದ ಕುರಿತು ಚರ್ಚಿಸಲು ನಾಳೆ ಕೇಂದ್ರ ಸಚಿವರ ಭೇಟಿಗೆ ಸಮಯ ನಿಗದಿಯಾಗಿದೆ ಎಂದು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ನಾಳೆ ಕೇಂದ್ರ ಸಚಿವರ ಭೇಟಿಗೆ ಸಮಯ ನಿಗದಿಯಾಗಿದೆ ನಾಳೆ ಬೆಳಿಗ್ಗೆ 10 ಗಂಟೆಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ ಮಾಡುತ್ತೇವೆ. ಇನ್ನು ಪ್ರಧಾನಿ  ಮೋದಿ ಭೇಟಿಗೆ ಸಮಯ ನಿಗದಿಯಾಗಿಲ್ಲ ಎಂದರು.ಕಾವೇರಿ ವಿವಾದ dks

ಇನ್ನು ಡಿಕೆ ಶಿವಕುಮಾರ್ ನೀರು ಕಳ್ಳ ಎಂಬ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಡಿ.ಕೆ ಶಿವಕುಮಾರ್, ನನ್ನ ವಿಚಾರಕ್ಕೆ ಬಂದವರಿಗೆ ಸೆಟ್ಲಮೆಂಟ್ ಆಗಿದೆ.  ಒಬ್ಬೊಬ್ಬರಿಗೂ ಸೆಟಲ್ ಮೆಂಟ್ ಆಗಿದೆ.  ಈಶ್ವರಪ್ಪ ಈಗ ಎಲ್ಲಿದ್ದಾರೆ ನಾನ್ ಎಲ್ಲಿದ್ದೀನಿ. ಈಶ್ವರಪ್ಪ ಅವರು ರೆಸ್ಟ್ ಮಾಡ್ಲಿ ಎಂದು ಲೇವಡಿ ಮಾಡಿದರು.

Key words: Cauvery Dispute- Union Minister- meet-tomorrow-DCM -DK Shivakumar.