Tuesday, September 29, 2026

BDA Apartments

ಡಿಕೆ ಶಿವಕುಮಾರ್ ಬಂಧನ‌ ವಿಚಾರ: ಕಾಂಗ್ರೆಸ್ ನಾಯಕರು ರಾಜಕೀಯದ ಬಣ್ಣ ಕೊಡುತ್ತ...
Home Front Page ಡಿಕೆ ಶಿವಕುಮಾರ್ ಬಂಧನ‌ ವಿಚಾರ: ಕಾಂಗ್ರೆಸ್ ನಾಯಕರು ರಾಜಕೀಯದ ಬಣ್ಣ ಕೊಡುತ್ತಿದ್ದಾರೆ- ಶಾಸಕ ಎಸ್,ಎ ರಾಮದಾಸ್...

ಡಿಕೆ ಶಿವಕುಮಾರ್ ಬಂಧನ‌ ವಿಚಾರ: ಕಾಂಗ್ರೆಸ್ ನಾಯಕರು ರಾಜಕೀಯದ ಬಣ್ಣ ಕೊಡುತ್ತಿದ್ದಾರೆ- ಶಾಸಕ ಎಸ್,ಎ ರಾಮದಾಸ್ ಟೀಕೆ…

ಮೈಸೂರು,ಸೆ,4,2019(www.justkannada.in): ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ‌ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ಸಿಗರು ರಾಜಕೀಯದ ಬಣ್ಣ ಕೊಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಟೀಕಿಸಿದರು.

ಈ ಬಗ್ಗೆ ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ರಾಮದಾಸ್,  ಕಾನೂನಿಗೆ ಯಾರೂ ದೊಡ್ಡವರಲ್ಲ ಎಂದು ಶಿವಕುಮಾರ್ ಅವ್ರೆ ಹೇಳಿದ್ದಾರೆ. ನಾನು ತಪ್ಪು ಮಾಡಿದ್ರೆ ನಾನು ಜೈಲಿಗೆ ಹೋಗುತ್ತೇನೆ ಅಂತ ವಿಧಾನಸೌದದಲ್ಲೆ ಹೇಳಿಕೊಂಡಿದ್ದಾರೆ. ಆದರೆ ಇದಕ್ಕೆ ರಾಜಕೀಯದ ಬಣ್ಣ ಕೊಡ್ತಾ ಇರೊದು ಕಾಂಗ್ರೆಸಿಗರು. ಕಾನೂನಿನ ಪ್ರಾಕಾರ ಏನು ಆಗ್ಬೇಕೊ ಆಗುತ್ತೆ. ತಪ್ಪಿತಸ್ಥರಲ್ಲ ಅಂದ್ರೆ ನ್ಯಾಯಾಲಯದಲ್ಲಿ ಹೊರಬರ್ತಾರೆ ಎಂದರು.

55 ವರ್ಷಗಳಿಂದ ಆಡಳಿತ ಮಾಡಿದವ್ರು ಕಾಂಗ್ರೆಸಿಗರು. ಯಾರಯಾರನ್ನ ಜೈಲಿಗೆ ಕಳ್ಸಿದ್ರು ಎಂಬು ಅವರಿಗೆ ಗೊತ್ತಿದೆ. ಇಂತದ್ರಲ್ಲಿ ಅವರು ಅನುಭವ ಇರೋರು ಹಾಗಾಗಿ ರಾಜಕೀಯ ಮಾತಾಡ್ತಾ ಇದಾರೆ ಎಂದು ಶಾಸಕ ಎಸ್ ಎ ರಾಮದಾಸ್ ತಿಳಿಸಿದರು.

Key words: DK Shivakumar- arrest –issue-  MLA S, A Ramadas -mysore