ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಶಕ್ಕೆ ನೀಡುವಂತೆ ಇಡಿ ಮನವಿ: ಆದೇಶ ಕಾಯ್ದಿರಿಸಿದ ಕೋರ್ಟ್…

ನವದೆಹಲಿ,ಸೆ,4,2019(www.justkannada.in): ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂಯೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಶಕ್ಕೆ ನೀಡುವಂತೆ  ಜಾರಿ ನಿರ್ದೇಶನಾಲಯ ಮನವಿ ಮಾಡಿದ್ದು, ಈ ಕುರಿತು ನವದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಆದೇಶವನ್ನ ಕಾಯ್ದಿರಿಸಿದಿದೆ.

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನ  ಬಂಧಿಸಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ನವದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಗೆ ಹಾಜರುಪಡಿಸಿದ್ದರು. ಈ ವೇಳೆ ಜಾರಿ ನಿರ್ದೇಶನಾಲಯ ಪರ ವಾದ ಮಂಡಿಸಿದ ಕೆಎಂ ನಟರಾಜ್,  ಕೆಲವೇ ವರ್ಷಗಳಲ್ಲಿ ಇವರ ಕುಟುಂಬ ಆಸ್ತಿಯಲ್ಲಿ ಏರಿಕೆಯಾಗಿದೆ. 28 ಕೋಟಿ ಅವ್ಯವಹಾರ ನಡೆದಿರುವುದು ಕಂಡು ಬಂದಿದೆ. ಫ್ಲಾಟ್ ನಲ್ಲಿ ಸಿಕ್ಕ ಹಣದ ಬಗ್ಗೆ ಸಮಂಜಸ  ವಿವರ ನೀಡಿಲ್ಲ. ಹೀಗಾಗಿ  ಇವರ ಮೇಲೆ ಅಕ್ರಮ ಹಣ ವರ್ಗಾವಣೆ ಆರೋಪ ಇದ್ದು ಬಂಧಿಸಿ ವಿಚಾರಣೆಗೊಳಪಡಿಸುವ ಅಗತ್ಯವಿದೆ. ಅದ್ದರಿಂದ  14 ದಿನ ವಶಕ್ಕೆ ನೀಡುವಂತೆ ಇಡಿ ಪರ ವಕೀಲರು ಮನವಿ ಮಾಡಿದರು.

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಪರ ಅಭಿಷೇಕ್ ಮನು ಸಿಂಘ್ವಿ ವಾದ. ಇಡಿ ಅಧಿಕಾರಿಗಳು ಡಿ.ಕೆ ಶಿವಕುಮಾರ್ ಅವರನ್ನ 4 ದಿನ ವಿಚಾರಣೆ ನಡೆಸಿದ್ದಾರೆ. ಹೀಗಾಗಿ ಒಂದು ಕ್ಷಣದ ವಿಚಾರಣೆಯೂ ಅಗತ್ಯವಿಲ್ಲ. ಡಿಕೆಶಿ ವಿಚಾರಣೆಗೆ ಹೆದರಿ ಓಡಿ ಹೀಗಲ್ಲ. ಅವರೇ ಖುದ್ದು ವಿಚಾರಣೆಗೆ ಹಾಜರಾಗಿದ್ದಾರೆ.  14 ದಿನ ಅಲ್ಲ ಒಂದು ಕ್ಷಣವೂ ಇಡಿ ಕಸ್ಟಡಿಗೆ ನೀಡಬೇಡಿ. ಪೂರ್ತಿ ಕೇಸ್ ಐಟಿ ದಾಳಿ ಆಧರಿಸಿದೆ. ಡಿಕೆ ಶಿವಕುಮಾರ್ ಅವರನ್ನ ಬಂಧಿಸುವ ಅಗತ್ಯವೇನಿತ್ತು. ತನಿಖಾ ಸಂಸ್ಥೆಗಳು ಇಡಿ ಕಸ್ಟಡಿಗೆ ಕೇಳುವ ಮುನ್ನ ಪ್ರಬಲ ಸಾಕ್ಷ್ಯಿ ಒದಗಿಸಬೇಕು. ಯಾವುದೇ ಷರತ್ತು ವಿಧಿಸಿಯಾದ್ರೂ ಜಾಮೀನು ಕೊಡಿ. ಆದರೆ ಜಾರಿ ನಿರ್ದೇಶನಾಲಯ ವಶಕ್ಕೆ ನೀಡಬೇಡಿ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಕೋರ್ಟ್ ನಲ್ಲಿ ಮನವಿ ಮಾಡಿದರು.

ವಾದ ಪ್ರತಿವಾದ ಆಲಿಸಿದ ಕೋರ್ಟ್ ಆದೇಶವನ್ನ ಕೆಲ ಹೊತ್ತಿನ ತನಕ ಕಾಯ್ದಿರಿಸಿದೆ.

Key words: ED – extradition – former minister- DK Sivakumar- Order – court