Sunday, August 9, 2026

BDA Apartments

Home Front Page ಇಡಿ ನಿಷ್ಕರುಣೆ, ಅಮಾನುಷವಾಗಿ ನಡೆದುಕೊಂಡಿದೆ-  ಡಿಕೆಶಿ ಬಂಧನ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಹೆಚ್.ಡಿ...

ಇಡಿ ನಿಷ್ಕರುಣೆ, ಅಮಾನುಷವಾಗಿ ನಡೆದುಕೊಂಡಿದೆ-  ಡಿಕೆಶಿ ಬಂಧನ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ

ಬೆಂಗಳೂರು,ಸೆ,4,2019(www.justkannada.in): ಹಬ್ಬದ ದಿನದಂದೂ ಡಿಕೆ ಶಿವಕುಮಾರ್ ಅವರಿಗೆ ತಂದೆಗೆ ಎಡೆ ಇಡುವ ಕಾರ್ಯಕ್ಕೂ ಅವಕಾಶ ಕೊಡದೆ ಜಾರಿ ನಿರ್ದೇಶನಾಲಯ ನಿಷ್ಕರುಣೆಯಿಂದ ನಡೆದುಕೊಂಡಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವಗೌಡರು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬಂಧನ  ವಿಚಾರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡ ದ ಹೆಚ್.ಡಿ ದೇವೇಗೌಡರು, ಇದು ರಾಜಕೀಯ ಪ್ರೇರಿತ. ಜಾರಿ ನಿರ್ದೇಶನಾಲಯದ ತನಿಖೆಗೆ ಶಿವಕುಮಾರ್ ಎಲ್ಲಾ ರೀತಿಯಲ್ಲಿ ಸಹಕಾರ ನೀಡಿದ್ದರು. ನಾಲ್ಕು ದಿನಗಳ ಕಾಲ ಸಹಕಾರ ನೀಡಿದ್ದಾರೆ. ಆದರೆ ನಿರೀಕ್ಷೆಯಂತೆ ಉತ್ತರ ಕೊಟ್ಟಿಲ್ಲ ಎಂದು ಬಂಧನ ಮಾಡಿದ್ದಾರೆ. ಇಡಿ ಅಧಿಕಾರಿಗಳಿಗೆ ಸಮಾಧಾನವಾಗುವ ಉತ್ತರ ಕೊಡಬೇಕಿತ್ತಾ ಎಂದು ಕಿಡಿಕಾರಿದರು.

ಹಬ್ಬದಂದು ಅವರ  ಕುಟುಂಬದ ಕಾರ್ಯ ನೆರವೇರಿಸಲು ಸಹ ಅವಕಾಶ ನೀಡದೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿಷ್ಕರುಣೆ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಅಧಿಕಾರಿಗಳ ಈ ಕ್ರಮ ಸರಿಯಲ್ಲ ಎಂದು ಹೆಚ್.ಡಿ ದೇವೇಗೌಡರು ಬೇಸರ ವ್ಯಕ್ತಪಡಿಸಿದರು.

Key words:  ED -Weirdly-   Former Prime Minister- HD Deve Gowda – displeasure –DK shivakumar-arrest