ಡಿ.ಕೆ ರವಿ ಅವರ ತಂದೆ ತಾಯಿ ವಿಡಿಯೋ ಬಿಡುಗಡೆ ಮಾಡಿ ಡಿ.ಕೆಶಿ ಅವರಿಂದ ಗಿಮಿಕ್- ಸಚಿವ ಆರ್.ಅಶೋಕ್…

ಬೆಂಗಳೂರು,ನವೆಂಬರ್,4,2020(www.justkannada.in):  ಆರ್.ಆರ್ ನಗರ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರಿಗೆ ಮತ ನೀಡುವಂತೆ ದಿ. ಡಿ.ಕೆ ರವಿ ಅವರ ತಾಯಿ ಗೌರಮ್ಮ ಮನವಿ ಮಾಡಿದ್ದ ವಿಡಿಯೋ ಕುರಿತು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದ್ದಾರೆ.jk-logo-justkannada-logo

ದಿ. ಡಿ.ಕೆ ರವಿ ಅವರ ತಂದೆ ತಾಯಿ ವಿಡಿಯೋ ಬಿಡುಗಡೆ ಮಾಡಿ ಡಿ.ಕೆ ಶಿವಕುಮಾರ್ ಗಿಮಿಕ್ ಮಾಡಿದ್ದಾರೆ. ಆದರೆ ಅವರ ಗಿಮಿಕ್ ಇಲ್ಲಿ ನಡೆಯಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಟಾಂಗ್ ನೀಡಿದ್ದಾರೆ.dk-ravi-father-mother-video-released-a-gimmick-dk-shivakumar-minister-r-ashok

ಆರ್.ಆರ್ ನಗರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ. ಶಿರಾ ಕ್ಷೇತ್ರದಲ್ಲಿ ಕಮಲ ಅರಳುತ್ತದೆ. ಕಾಂಗ್ರೆಸ್ ಗೆ ಮತ ಹಾಕುವವರು ಯಾರೂ ಇಲ್ಲ. ಹೀಗಾಗಿ ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಆರ್. ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.

Key words: DK Ravi- father –mother-video-released a -gimmick –DK Shivakumar-Minister -R. Ashok.