ಡಿ.ಜೆ ಹಳ್ಳಿ, ಕೆಜಿ ಹಳ್ಳಿ ಗಲಾಟೆ ಪ್ರಕರಣ: ಒಟ್ಟು 42 ಎಫ್ ಐಆರ್ ದಾಖಲು…

ಬೆಂಗಳೂರು,ಆ,15,2020(www.justkannada.in): ಬೆಂಗಳೂರಿನ ಡಿ.ಜೆ ಹಳ್ಳಿ, ಕೆಜಿ ಹಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 42 ಎಫ್ ಐಆರ್ ದಾಖಲಾಗಿವೆ.jk-logo-justkannada-logo

ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ 27, ಕೆಜಿಹಳ್ಳಿ ಪೊಲೀಸ್ ಠಾಣೆಯಲ್ಲಿ 15 ಪ್ರಕರಣಗಳು ದಾಖಲಾಗಿವೆ. ಇನ್ನು ಪ್ರಕರಣ ಸಂಬಂಧ ಶಾಸಕ ಅಖಂಡ ಶ್ರೀನಿವಾಸಮೂರ್ತಿ ದೂರು ನೀಡಿದ್ದಾರೆ. ಜತೆಗೆ ಆಸ್ತಿಪಾಸ್ತಿ ಹಾನಿ ಕುರಿತು ಸಾರ್ವಜನಿಕರಿಂದಲೂ ದೂರು ದಾಖಲಾಗಿದೆ.dj-halli-kg-halli-riot-case-42-fir-registrations

ಈ ನಡುವೆ ಇಂದು ಡಿಸಿಪಿ ಶರಣಪ್ಪ ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಈ ವೇಳೆ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದ ಅವರು ಅಲ್ಲಿನ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಧೈರ್ಯ ಹೇಳಿದರು.

Key words: DJ halli- KG halli- riot case-42 FIR- registrations.