Friday, October 9, 2026

BDA Apartments

Home Crime ಯುವತಿ ತಬ್ಬಿಕೊಂಡು ಬೆಂಕಿ ಹಚ್ಚಿಕೊಂಡಿದ್ದ ಭಗ್ನಪ್ರೇಮಿ ಕೊನೆಗೂ ಬದುಕುಳಿಯಲಿಲ್ಲ

ಯುವತಿ ತಬ್ಬಿಕೊಂಡು ಬೆಂಕಿ ಹಚ್ಚಿಕೊಂಡಿದ್ದ ಭಗ್ನಪ್ರೇಮಿ ಕೊನೆಗೂ ಬದುಕುಳಿಯಲಿಲ್ಲ

ಮೈಸೂರು,ಅಕ್ಟೋಬರ್,9,2026 (www.justkannada.in): ಪ್ರೀತಿಸುವಂತೆ ಪೀಡಿಸಿ ಯುವತಿಯನ್ನು ತಬ್ಬಿಕೊಂಡು  ಬೆಂಕಿ ಹಂಚಿಕೊಂಡಿದ್ದ ಭಗ್ನಪ್ರೇಮಿ ಚಂದನ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದ ನಿವಾಸಿ ಚಂದನ್ ಮೈಸೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿಗೆ ಪ್ರೀತ್ಸೆ ಪ್ರೀತ್ಸೆ ಅಂತ ದುಂಬಾಲು ಬಿದ್ದಿದ್ದ. ಪ್ರೀತಿ‌ ನಿರಾಕರಿಸಿದ್ದಕ್ಕೆ ಯುವತಿಯನ್ನ ತಬ್ಬಿಕೊಂಡು ಪೆಟ್ರೋಲ್ ಸುರಿದುಕೊಂಡಿದ್ದ‌. ತಾನೂ ಸುಟ್ಟುಕೊಂಡು ಆಕೆಯನ್ನೂ ಸುಡುವ ಯೋಜನೆ ಮಾಡಿಕೊಂಡಿದ್ದ. ಆತನಿಂದ ಯುವತಿ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.Mysore

ಶೇ. 80 ರಷ್ಟು ಸುಟ್ಟ ಗಾಯಗಳಿಂದ  ಚಂದನ್ ಕೆಆರ್ ಆಸ್ಪತ್ರೆಗೆ ದಾಖಲಾಗಿದ್ದ.  ಇದೀಗ 8 ದಿನದ ಬಳಿಕ ಚಂದನ್  ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಮತ್ತೊಂದೆಡೆ ಶೇ.20 ರಷ್ಟು ಸುಟ್ಟ ಗಾಯಗಳಿಂದ ಯುವತಿಗೆ ಚಿಕಿತ್ಸೆ ಮುಂದುವರೆದಿದೆ.Mysore jk02_new jk02 new

 

English Summary
Title

Mysuru Petrol Fire Attack: Stalker Sets Himself and Student Ablaze After Love Rejection

Short Description
A shocking incident unfolded near Vidyavardhaka College in Mysuru, Karnataka, when a 27-year-old man named Chandan set himself on fire and targeted a young woman. Following years of unrequited love and a previous police warning for harassment, Chandan intercepted the diploma engineering student on her way to college. Upon her final rejection, he poured petrol on himself, ignited the flames, and forcibly embraced her. Passersby intervened quickly; the young woman escaped with 20% burn injuries, while Chandan suffered critical burns up to 80%. Both survived the initial attack and are hospitalised. The Vijayanagar Police are investigating the case
Keywords
Mysore, Chandan, love, young woman, fire, died