Friday, October 9, 2026

BDA Apartments

Home Front Page ಮೈಸೂರು ದಸರಾ ಉದ್ಘಾಟಿಸಲಿರುವ ಗವಿಸಿದ್ಧೇಶ್ವರ ಶ್ರೀಗಳ ಜೀವನ, ಸಾಧನೆ ಬಗ್ಗೆ ತಿಳಿಯೋಣ ಬನ್ನಿ

ಮೈಸೂರು ದಸರಾ ಉದ್ಘಾಟಿಸಲಿರುವ ಗವಿಸಿದ್ಧೇಶ್ವರ ಶ್ರೀಗಳ ಜೀವನ, ಸಾಧನೆ ಬಗ್ಗೆ ತಿಳಿಯೋಣ ಬನ್ನಿ

ಬೆಂಗಳೂರು, ಅಕ್ಟೋಬರ್, 9,2026 (www.justkannada.in): ಐತಿಹಾಸಿಕ, ಜಗತ್ಪ್ರಸಿದ್ಧ ಮೈಸೂರು ದಸರೆಯನ್ನು ಈ ಬಾರಿ ಕೊಪ್ಪಳದ ಸಂಸ್ಥಾನ ಗವಿಮಠದ  ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಅಕ್ಟೋಬರ್ 11 ರಂದು ನಾಡದೇವಿ ಶ್ರೀ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ‌ ಉದ್ಘಾಟಿಸಲಿದ್ದಾರೆ.

ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಪರಿಚಯ

ಕೊಪ್ಪಳ ಗವಿಮಠದ ಪೀಠಾಧಿಪತಿಯಾಗಿ ಲಕ್ಷಾಂತರ ಭಕ್ತರ ಹೃದಯದಲ್ಲಿ ಸ್ಥಾನ ಪಡೆದಿರುವ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಕಲಬುರಗಿ ಜಿಲ್ಲೆಯ ಹಾಗರಗುಂಡಗಿ ಗ್ರಾಮದ ಸಾಮಾನ್ಯ ಜಂಗಮ‌ ಕುಟುಂಬವೊಂದರಲ್ಲಿ 1977 ರಲ್ಲಿ ಜನಿಸಿದರು.

ಇವರ ಪೂರ್ವಾಶ್ರಮದ ಹೆಸರು ಪರ್ವತಯ್ಯ ಹಿರೇಮಠ  , ಕುಟುಂಬದ ಆರ್ಥಿಕ ಸಂಕಷ್ಟದ  ಪರಿಣಾಮ ಪರ್ವತಯ್ಯನವರ ಶಿಕ್ಷಣ ಪದೇಪದೇ ಅಡಚಣೆಗೆ ಒಳಗಾಗುತ್ತಿತ್ತು.

1989-90 ರ ಸಮಯದಲ್ಲಿ  ಹಾಗರಗುಂಡಗಿ ಗ್ರಾಮಕ್ಕೆ ಬಂದಿದ್ದ ವಿಜಯಪುರದ ತಮದಡ್ಡಿ ಮಠದ ಶ್ರೀ ಶಿವಶಂಕರ ಸ್ವಾಮೀಜಿಗಳು

“ಈತನನ್ನು ಶಾಲೆಯಿಂದ ಯಾಕೆ ಬಿಡಿಸುತ್ತೀರಿ? ನಾನು ಎಲ್ಲಿಯಾದರೂ ಮಠಕ್ಕೆ ಸೇರಿಸಿ ಶಾಲೆ ಓದಿಸುತ್ತೇನೆ” ಎಂದು  ಪರ್ವತಯ್ಯನ ತಂದೆ-ತಾಯಿಗೆ ಭರವಸೆ ನೀಡಿ ತಮ್ಮೊಂದಿಗೆ ಕರೆದುಕೊಂಡು ಗದಗ ಜಿಲ್ಲೆಯ ಮುಂಡರಗಿಯ ಶ್ರೀ ಅನ್ನದಾನೇಶ್ವರ ಮಠದ ಬೋರ್ಡಿಂಗ್‌ಗೆ ಸೇರಿಸಲು ಹೊರಡುತ್ತಾರೆ. ಮಾರ್ಗ ಮಧ್ಯೆ ಕೊಪ್ಪಳದಿಂದ ಮುಂಡರಗಿಗೆ ಹೋಗುವ ಕೊನೆಯ ಬಸ್ ತಪ್ಪಿ ಹೋಗುತ್ತದೆ.ಅಂದು ರಾತ್ರಿ ಕೊಪ್ಪಳದ ಗವಿಮಠದಲ್ಲಿ ವಸತಿ ಮಾಡಲು ಅಲ್ಲಿದ್ದ ಸಹಪ್ರಯಾಣಿಕರೊಬ್ಬರ ಸಲಹೆ ನೀಡುತ್ತಾರೆ. ಕೊಪ್ಪಳದ ಗವಿಮಠಕ್ಕೆ ಈ ಬಂದ ಬಾಲಕನನ್ನು ಅಂದಿನ ಗವಿಮಠದ ಪೀಠಾಧಿಪತಿ‌ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ಗಮನಿಸುತ್ತಾರೆ, ಎಲ್ಲಿಗೆ ಹೊರಟಿದ್ದು ಎಂದು ವಿಚಾರಿಸುತ್ತಾರೆ.ತಮದಡ್ಡಿಯ ಶ್ರೀಗಳು ಮುಂಡರಗಿಗೆ ಹೋಗುವ ಉದ್ದೇಶ ತಿಳಿಸುತ್ತಾರೆ.ಗವಿಮಠದಲ್ಲಿಯೂ ಉತ್ತಮ ಶಿಕ್ಷಣ, ಬೋರ್ಡಿಂಗ್ ಇದೆ ಇಲ್ಲಿಯೇ ಪ್ರವೇಶ ಪಡೆಯಬಹುದು ನೋಡಿ ಬನ್ನಿ ಎಂದು ನೀಡುತ್ತಾರೆ. ಗವಿಮಠ,ಪ್ರೌಢಶಾಲೆ ,ಬೋರ್ಡಿಂಗ್ ನೋಡಿದ ಪರ್ವತಯ್ಯ ಹಾಗೂ ತಮದಡ್ಡಿ ಶ್ರೀಗಳು ಕೊಪ್ಪಳದಲ್ಲಿಯೇ ವ್ಯಾಸಂಗ ಮುಂದುವರೆಸಲು ನಿರ್ಧರಿಸುತ್ತಾರೆ.ವಿದ್ಯಾರ್ಥಿಯಾಗಿ ಮಠಕ್ಕೆ ಬಂದ ಪರ್ವತಯ್ಯನವರು ಅಂದಿನ‌ ಪೀಠಾಧಿಪತಿ ಶ್ರೀ ಶಿವಶಾಂತವೀರ ಸ್ವಾಮಿಗಳ ವಿಶೇಷ ದೃಷ್ಟಿ,ಕಾಳಜಿಯಿಂದ ಹಿರಿಯ ಶ್ರೀಗಳು  ತಮ್ಮ ವಾಸಸ್ಥಳದ ಸಮೀಪ, ಗವಿಯ ಬಳಿಯ ಕೋಣೆಯಲ್ಲಿಯೇ  ಇರಲು ಹೇಳಿದರು.Sri Gavisiddeshwara Swamiji Inaugurate Mysuru gavisiddeshwar.jpg1

ಪರ್ವತಯ್ಯ ಓದುತ್ತಾ, ಮಠದ ಸೇವೆ ಮಾಡುತ್ತಾ, ಗುರುಗಳ ಮಾರ್ಗದರ್ಶನದಲ್ಲಿ ಪರ್ವತದೇವರಾಗಿ  ಬೆಳೆಯತೊಡಗಿದರು.

ಶಿವಶಾಂತವೀರ ಮಹಾಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಬಸವಾದಿ ಶರಣರ  ವಚನಗಳು ಸೇರಿ, ಹಲವು ಗ್ರಂಥಗಳನ್ನು ನೀಡಿದರು. ಆಹಾರ, ದಿನಚರಿ, ಶಿಸ್ತಿನೊಂದಿಗೆ  ಮತ್ತು ಅಧ್ಯಯನ ಮುಂದುವರೆಸಿದರು.

ಬಿ.ಎ.ಪದವಿಯನ್ನು ಗುಲ್ಬರ್ಗಾ ವಿಶ್ವವಿದ್ಯಾಲದ ರ‌್ಯಾಂಕಿನೊಂದಿಗೆ ಉತ್ತೀರ್ಣರಾದರು.ಮುಂದೆ ಪುಣೆ,ತಿರುಪತಿಯಲ್ಲಿ ತತ್ವಶಾಸ್ತ್ರ, ಸಂಸ್ಕೃತ ಹಾಗೂ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದರು.

ಶ್ರೀ ಶಿವಶಾಂತವೀರ ಮಹಾಸ್ವಾಮೀಜಿಗಳ ಇಚ್ಛೆಯಂತೆ  2002ರ ಡಿಸೆಂಬರ್ 13ರಂದು 25 ವರ್ಷದ  ಪರ್ವತದೇವರಿಗೆ  “ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿ”ಯಾಗಿ ನಿರಂಜನ ಪಟ್ಟಾಧಿಕಾರ ನೀಡಲಾಯಿತು.

ಗವಿಮಠದ ಜಾತ್ರೆಗೆ ಹೊಸ ಸ್ವರೂಪಜಾತ್ರೆ ಎಂದರೆ  ದೇವರ ದರ್ಶನ, ಉತ್ಸವ ಮತ್ತು ಪ್ರಸಾದಕ್ಕೆ ಸೀಮಿತವಾಗಬಾರದು. ಅದು ಸಮಾಜದ ಸಮಸ್ಯೆಗಳ ಕುರಿತು ಚಿಂತಿಸುವ, ಜನರನ್ನು ಜಾಗೃತಗೊಳಿಸುವ ಮತ್ತು ಹೊಸ ಆಲೋಚನೆಗಳಿಗೆ ವೇದಿಕೆಯಾಗಬೇಕು ಎಂಬ ದೃಷ್ಟಿಯಿಂದ ಜಾತ್ರೆಯನ್ನು ಸಾಂಸ್ಕೃತಿಕ,ಕ್ರೀಡೆ ಹಾಗೂ ಮಹಾದಾಸೋಹಗಳ ಜಾಗೃತಿ ಉತ್ಸವವಾಗಿ ರೂಪಿಸಿದರು.

ಮಹಾದಾಸೋಹದ ವಿಸ್ತರಣೆ

ಗವಿಮಠದ ಪರಂಪರೆಯಲ್ಲಿ ದಾಸೋಹಕ್ಕೆ ವಿಶೇಷ ಸ್ಥಾನವಿದೆ. ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಅದಕ್ಕೆ ಮತ್ತಷ್ಟು ವಿಸ್ತಾರ ನೀಡಿದರು.

ಜಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಜನರಿಗೆ ಪ್ರಸಾದ ಒದಗಿಸುವ ವ್ಯವಸ್ಥೆ ರೂಪುಗೊಂಡಿತು. ಭಕ್ತರು ತಮ್ಮ ಮನೆಗಳಿಂದ ರೊಟ್ಟಿಗಳನ್ನು,ದವಸ,ಧಾನ್ಯಗಳನ್ನು, ತರಕಾರಿಗಳನ್ನು  ತಂದುಕೊಟ್ಟು ಪ್ರತಿದಿನ ಸ್ವಯಂ ಪ್ರೇರಿತರಾಗಿ ದುಡಿದು ಲಕ್ಷಾಂತರ ಭಕ್ತರಿಗೆ  ಮಹಾದಾಸೋಹ ನಿರ್ವಹಿಸುತ್ತಾರೆ.

ಪರಿಸರ ಜಾಗೃತಿ

ಬಿಸಿಲ ನಾಡು ಕೊಪ್ಪಳ ಭಾಗದಲ್ಲಿ ಹಸಿರು ವಾತಾವರಣ ನಿರ್ಮಿಸುವ ಸಂಕಲ್ಪದೊಂದಿಗೆ  ಪ್ರತಿವರ್ಷ ಲಕ್ಷಾಂತರ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ಅನ್ನದಾಸೋಹದ ಜತೆಗೆ “ಸಸ್ಯ ದಾಸೋಹ”ದ ಕಲ್ಪನೆಯನ್ನು ಮುಂದಿಟ್ಟಿದ್ದಾರೆ. ಮರ ನೆಡುವುದು ಒಂದು ದಿನದ ಕಾರ್ಯಕ್ರಮವಲ್ಲ; ಭವಿಷ್ಯದ ಪೀಳಿಗೆಗೆ ಉಸಿರಿನ ದಾಸೋಹ ನೀಡುವ ಕಾರ್ಯ ಎಂಬ ಸಂದೇಶವನ್ನು ಜನರಿಗೆ ತಲುಪಿಸುತ್ತಿದ್ದಾರೆ.Sri Gavisiddeshwara Swamiji Inaugurate Mysuru gavisiddeshwar

ಜಲ ಸಂರಕ್ಷಣೆ

ಬರ ಮತ್ತು ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಅವರು ಜಲಸಂರಕ್ಷಣೆಯತ್ತಲೂ ಗಮನ ಹರಿಸಿದ್ದಾರೆ. ಕೊಪ್ಪಳ ತಾಲೂಕಿನ ಹಿರೇಹಳ್ಳದ ಪುನಶ್ಚೇತನಕ್ಕೆ ಮುಂದಾಗಿ,ಸುಮಾರು 25–26 ಕಿಲೋಮೀಟರ್ ವ್ಯಾಪ್ತಿಯ ಹಿರೇಹಳ್ಳವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ ನಡೆಯಿತು. ಸರ್ಕಾರದ ಸಹಕಾರದೊಂದಿಗೆ ಬ್ಯಾರೇಜ್‌ಗಳನ್ನು ನಿರ್ಮಿಸಿ ನೀರು ಸಂಗ್ರಹಿಸುವ ವ್ಯವಸ್ಥೆಗೆ ಒತ್ತು ನೀಡಿದ್ದಾರೆ.ಮೈಸೂರು ದಸರಾ ಉದ್ಘಾಟಿಸಲಿರುವ ಗವಿಸಿದ್ಧೇಶ್ವರ ಶ್ರೀಗಳ ಜೀವನ mysore-dasara mysore dasara

ಇದರಿಂದ ಗ್ರಾಮಗಳ ಜನರು ಹಾಗೂ ಜಾನುವಾರುಗಳಿಗೆ ನೀರಿನ ಅನುಕೂಲವಾಗುವುದರ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲು ನೆರವಾಗಿದೆ. ಜಿಲ್ಲೆಯ ವಿವಿಧ ಕೆರೆಗಳ ಪುನಶ್ಚೇತನಕ್ಕೂ ಒತ್ತು ನೀಡಲಾಗಿದೆ. ಜಾತ್ರೆಯಲ್ಲಿ “ಜಲದೀಕ್ಷೆ”ಯಂತಹ ಅಭಿಯಾನಗಳ ಮೂಲಕ ನೀರಿನ ಸಂರಕ್ಷಣೆಯನ್ನು ಸಾಮಾಜಿಕ ಹಾಗೂ ಧಾರ್ಮಿಕ ಜಾಗೃತಿಯೊಂದಿಗೆ ಜೋಡಿಸಿದ್ದಾರೆ.

ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿ

ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ದೃಷ್ಟಿಯಲ್ಲಿ ಶಿಕ್ಷಣ ಸಮಾಜ ಪರಿವರ್ತನೆಯ ಪ್ರಮುಖ ಸಾಧನ. ಮಹಿಳಾ ಶಿಕ್ಷಣ, ಯುವಜನರ ಶಿಕ್ಷಣ, ವಿಶೇಷ ಚೇತನರ ಕಲ್ಯಾಣ, ಬಾಲ್ಯವಿವಾಹ ವಿರೋಧಿ ಜಾಗೃತಿ ಹಾಗೂ ಗ್ರಾಮೀಣ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಮಹಿಳೆಯರಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಆಶಯದಿಂದ ವಸತಿ ವ್ಯವಸ್ಥೆಯೊಂದಿಗೆ ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕೂ ಒತ್ತು ನೀಡಿದ್ದಾರೆ.

ಜ್ಞಾನ ದಾಸೋಹ

ಅನ್ನದಾಸೋಹದಷ್ಟೇ ಜ್ಞಾನದಾಸೋಹವೂ ಮುಖ್ಯ ಎಂಬ ಚಿಂತನೆಯೊಂದಿಗೆ 24 ಗಂಟೆಗಳ ಗ್ರಂಥಾಲಯದಂತಹ ವ್ಯವಸ್ಥೆಗಳಿಗೆ ಉತ್ತೇಜನ ನೀಡಲಾಗಿದೆ. ಗ್ರಂಥಾಲಯ, ಶಿಕ್ಷಣ ಸಂಸ್ಥೆಗಳು, ವಸತಿ ವ್ಯವಸ್ಥೆ ಮತ್ತು ಉಚಿತ ಶಿಕ್ಷಣದ ಮೂಲಕ ಜ್ಞಾನವನ್ನು ಎಲ್ಲರಿಗೂ ತಲುಪಿಸುವ ಪ್ರಯತ್ನ ನಡೆದಿದೆ.

ಐದು ಸಾವಿರ ಮಕ್ಕಳಿಗೆ ಉಚಿತ ಹಾಸ್ಟೇಲ್

ಯಾರೂ ಹಸಿವಿನಿಂದ ಮಲಗಬಾರದು ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಸೇವಾ ಚಿಂತನೆಯ ಮತ್ತೊಂದು ಪ್ರಮುಖ ಅಂಶ ಹಸಿವು ನಿವಾರಣೆ.ವಸತಿ,ಊಟದ ಕಾರಣಕ್ಕಾಗಿ ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಧ್ಯೇಯದೊಂದಿಗೆ ಸುಮಾರು ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸುಸಜ್ಜಿತ ಬೋರ್ಡಿಂಗ್ ಸ್ಥಾಪಿಸಿ,ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಕೊಪ್ಪಳ ತಾಲ್ಲೂಕಿನ ಕೋಳೂರು ಗ್ರಾಮದ ಬಳಿ ವಿದ್ಯಾರ್ಥಿನಿಯರಿಗಾಗಿ ಉಚಿತ ಹೈಟೆಕ್ ವಸತಿt ಕಾಲೇಜು ಕೂಡ ಸ್ಥಾಪಿಸಿದ್ದಾರೆ.ಸಾಧನೆ ಬಗ್ಗೆ ತಿಳಿಯೋಣ ಬನ್ನಿ jk02_new jk02 new

ಕೊಪ್ಪಳ ಭಾಗದಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಿ,ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಕಾರ್ಖಾನೆಗಳ ವಿರುದ್ಧ ಹೋರಾಡುತ್ತಿದ್ದಾರೆ. ಕೋವಿಡ್ ಕಾಲದಲ್ಲಿ ಶ್ರೀ ಗವಿಮಠ ಮತ್ತು ಶ್ರೀಗಳು ತೋರಿದ  ಸಾಮಾಜಿಕ ಕಾಳಜಿಯ ಕಾರ್ಯಗಳು ಪ್ರಶಂಸನೀಯವಾಗಿವೆ.

Key words: life, achievements, Sri Gavisiddeshwara, inaugurate, Mysuru Dasara.

English Summary
Title

Sri Gavisiddeshwara Swamiji to Inaugurate Mysuru Dasara 2026 | Biography & Legacy

Short Description
Sri Abhinava Gavisiddeshwara Swamiji, the revered pontiff of Koppal’s historic Gavimath, has been chosen to inaugurate the Mysuru Dasara 2026 festival on October 11. Known as the "Jala Rushi" (Water Sage) of North Karnataka, the seer is widely celebrated for his revolutionary achievements in lake rejuvenation, water conservation, and massive social welfare programs. Under his leadership, the mutt provides free education, food, and housing to thousands of rural students. His selection to kickstart Karnataka's Nada Habba highlights his immense spiritual and social legacy, making this year's festival a grand celebration of heritage and community impact.