Friday, October 9, 2026

BDA Apartments

Home Front Page ರೈತನ ಮನೆ ಜಪ್ತಿಗಿಳಿದ ಬ್ಯಾಂಕ್ ಅಧಿಕಾರಿಗಳು: ಮಧ್ಯಪ್ರವೇಶಿಸಿ ಅನ್ನದಾತನ ಪರ ಧ್ವನಿ ಎತ್ತಿದ ಸಂಸದ ಯದುವೀರ್

ರೈತನ ಮನೆ ಜಪ್ತಿಗಿಳಿದ ಬ್ಯಾಂಕ್ ಅಧಿಕಾರಿಗಳು: ಮಧ್ಯಪ್ರವೇಶಿಸಿ ಅನ್ನದಾತನ ಪರ ಧ್ವನಿ ಎತ್ತಿದ ಸಂಸದ ಯದುವೀರ್

ಕೊಡಗು,ಅಕ್ಟೋಬರ್,9,2026 (www.justkannada.in): ಕೊಡಗು ಜಿಲ್ಲೆಯ ​ಬೀಳೂರಿನ ರೈತ ಕಾಂಡೇರ ಸುರೇಶ್ ಎಂಬುವವರ ಅವರ ನಿವಾಸದಲ್ಲಿ ಪೊನ್ನಂಪೇಟೆ ಕೆನರಾ ಬ್ಯಾಂಕ್ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಮನೆಯ ವಸ್ತುಗಳನ್ನು ಹೊರಹಾಕಿ, ಬೀಗ ಜಡಿದು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದ ಅಮಾನವೀಯ ಘಟನೆ ಗಮನಕ್ಕೆ ಬರುತ್ತಿದ್ದಂತೆಯೇ  ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಕ್ಷಣವೇ ಮಧ್ಯಪ್ರವೇಶಿಸಿದ್ದಾರೆ.

​37.50 ಲಕ್ಷ ರೂ. ಅಸಲು ಸಾಲಕ್ಕೆ ಬಡ್ಡಿ ಸೇರಿಸಿ 1.43 ಕೋಟಿ ರೂ. ವಸೂಲಾತಿಯ ಹೆಸರಿನಲ್ಲಿ, ಎಕರೆಗೆ ಸುಮಾರು 50 ಲಕ್ಷ ರೂ. ಬೆಲೆಬಾಳುವ 11 ಎಕರೆ ಫಲವತ್ತಾದ ಕಾಫಿ ತೋಟವನ್ನು ಕೇವಲ ₹12 ಲಕ್ಷದ ಕನಿಷ್ಠ ದರಕ್ಕೆ ಹರಾಜು ಹಾಕಿರುವುದು ಮೇಲ್ನೋಟಕ್ಕೇ ರೈತ ಕುಟುಂಬಕ್ಕೆ ಮಾಡಿದ ಅನ್ಯಾಯವಾಗಿದೆ. ಈ ಕುರಿತು ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮುಂದುವರಿದಿರುವಾಗಲೇ, ಏಕಾಏಕಿ ಮನೆ ಖಾಲಿ ಮಾಡಿಸಿ ಕುಟುಂಬವನ್ನು ಮುಜುಗರಕ್ಕೀಡುಮಾಡಿರುವ ಕ್ರಮವನ್ನು ಸಂಸದ ಯದುವೀರ್ ತೀವ್ರವಾಗಿ ಖಂಡಿಸಿದ್ದಾರೆ.Kodagu yadveer

​ವಿಷಯ ತಿಳಿದ ತಕ್ಷಣವೇ ಕಾರ್ಯಪ್ರವೃತ್ತರಾದ ಸಂಸದ ಯದುವೀರ್ ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್, ಪೊನ್ನಂಪೇಟೆ ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರು, ಹಾಗೂ ಕೆನರಾ ಬ್ಯಾಂಕಿನ ಉನ್ನತ ಅಧಿಕಾರಿಗಳು (CFO) ಇವರೊಂದಿಗೆ ಖುದ್ದು ಮಾತನಾಡಿ, “ಕೋರ್ಟ್‌ ನಲ್ಲಿ ವಿಚಾರಣೆ ನಡೆಯುತ್ತಿರುವಾಗ ಇಂತಹ ಆತುರದ ಮತ್ತು ಕಠಿಣ ಕ್ರಮಗಳು ಸಮರ್ಥನೀಯವಲ್ಲ. ತಕ್ಷಣವೇ ಏಕಪಕ್ಷೀಯ ಮುಟ್ಟುಗೋಲು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ನಿಯಮಾನುಸಾರ ಹಾಗೂ ಮಾನವೀಯ ನೆಲೆಗಟ್ಟಿನಲ್ಲಿ ರೈತನಿಗೆ ನ್ಯಾಯ ಒದಗಿಸಬೇಕು” ಎಂದು ತಾಕೀತು ಮಾಡಿದ್ದಾರೆ.Kodagu yaduveer yaduveer 1

​ಅಲ್ಲದೆ, “ಈ ಸಂಪೂರ್ಣ ಪ್ರಕರಣ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರಿಗೆ ಆಗುತ್ತಿರುವ ಇಂತಹ ಅನ್ಯಾಯದ ಕುರಿತು ಕೇಂದ್ರ ಹಣಕಾಸು ಸಚಿವರ ಗಮನಕ್ಕೂ ತಂದು, ಉನ್ನತ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು” ಎಂದು ಸಂಸದ ಯದುವೀರ್ ಭರವಸೆ ನೀಡಿದ್ದಾರೆ.Bank officials jk02_new jk02 new

​ಯಾವುದೇ ಸಂದರ್ಭದಲ್ಲೂ ನಮ್ಮ ರೈತರು ಮತ್ತು ಅವರ ಕುಟುಂಬ ಬೀದಿಗೆ ಬೀಳಲು ಬಿಡುವುದಿಲ್ಲ. ಸಂಕಷ್ಟದಲ್ಲಿರುವ ಕಾಂಡೇರ ಸುರೇಶ್ ಅವರ ಕುಟುಂಬಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಸಂಸದ ಯದುವೀರ್ ತಿಳಿಸಿದ್ದಾರೆ.

 

English Summary
Title

Bank officials move to seize farmer's house in Kodagu; MP Yaduveer intervenes and speaks up for the farmer.

Short Description
Amid rising distress over forced loan recoveries in Karnataka, Mysuru-Kodagu MP Yaduveer Krishnadatta Chamaraja Wadiyar strongly intervened to support a local farmer facing property attachment by bank officials. Despite a state moratorium aimed at shielding drought-hit agriculturalists from aggressive collection notices, banks have continued to push for physical evictions and account freezes. Stepping up for the constituency's coffee and crop growers, MP Yaduveer's ongoing advocacy seeks immediate relief from banking authorities, demanding restructured repayment timelines and an end to the harassment of debt-ridden families.
Keywords
Kodagu, Bank officials, seize, farmer's, house, MP Yaduveer, intervenes