Friday, November 6, 2026

Dasara Wishes

ಕುಡಿಯುವ ನೀರಿಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ- ಜಿಲ್ಲಾಧಿಕಾರಿಗಳ...
Happy Dasara
Home Front Page ಮೈದಾನದಲ್ಲೇ ರಕ್ತ ಉಗುಳಿದ ಧೋನಿ: ಫೋಟೋ ವೈರಲ್

ಮೈದಾನದಲ್ಲೇ ರಕ್ತ ಉಗುಳಿದ ಧೋನಿ: ಫೋಟೋ ವೈರಲ್

ಬರ್ಮಿಂಗ್ ಹ್ಯಾಮ್, ಜುಲೈ 07, 2019 (www.justkannada.in):  ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಮೈದಾನದಲ್ಲೇ ಧೋನಿ ರಕ್ತ ಉಗುಳಿದ ಫೋಟೋ ವೈರಲ್ ಆಗಿದ್ದು ಇದು ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ.

ಆತಿಥೇಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 31 ರನ್ ಗಳಿಂದ ಸೋಲು ಕಂಡಿದೆ. ಇನ್ನು ಇದೇ ಪಂದ್ಯದಲ್ಲಿ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಗಾಯದ ನಡುವೆಯೂ ಎಂಎಸ್ ಧೋನಿ ಬ್ಯಾಟಿಂಗ್ ಮುಂದುವರಿಸಿದ್ದರು.

ಕೈ ಬೆರಳಿನಿಂದ ಜಿನುಗುತ್ತಿದ್ದ ರಕ್ತವನ್ನು ಚೀಪಿ ಧೋನಿ ಅದನ್ನು ಮೈದಾನದಲ್ಲಿ ಉಗುಳಿದ್ದರು. ಈ ಫೋಟೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಧೋನಿ ವೃತ್ತಿಪರತೆ ಹಾಗೂ ದೇಶಕ್ಕಾಗಿ ತಮ್ಮ ನೋವನ್ನೇ ಮರೆತು ಆಡುತ್ತಿದ್ದಾರೆ ಎಂದು ಕೊಂಡಾಡಿದ್ದಾರೆ.