ಸೆಪ್ಟೆಂಬರ್ 24 ರಂದು ‘ಬಡವ ರಾಸ್ಕಲ್’ ಆಗಿ ತೆರೆ ಮೇಲೆ ಬರಲಿದ್ದಾರೆ ಡಾಲಿ !

ಬೆಂಗಳೂರು, ಜುಲೈ  28, 2021 (www.justkannada.in): ಡಾಲಿ ಇದೀಗ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ.

ಯೆಸ್.  ಇದೀಗ ‘ಬಡವ ರಾಸ್ಕಲ್’ ಆಗಿ ಪ್ರೇಕ್ಷಕರ ಮುಂದೆ ಬರಲು ಧನಂಜಯ್ ಸಜ್ಜಾಗಿದ್ದಾರೆ.

ಅಂದಹಾಗೆ  ‘ಯುವರತ್ನ’ ಬಳಿಕ ಡಾಲಿಯ ಯಾವುದೇ ಚಿತ್ರದ ಅಪ್ಡೇಟ್​ಗಳು ಹೊರಬಿದ್ದಿರಲಿಲ್ಲ. ಇದೀಗ ಹೊಸ ಸುದ್ದಿಯೊಂದು ಹೊರಬಿದ್ದಿದೆ.

ಈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ‘ಬಡವ ರಾಸ್ಕಲ್’ ಅವತಾರದಲ್ಲಿ ಡಾಲಿ ಸೆಪ್ಟೆಂಬರ್ 24 ರಂದು ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಈಗಾಗಲೇ ಚಿತ್ರದ ಶೂಟಿಂಗ್ ಹಾಗೂ ಡಬ್ಬಿಂಗ್ ಕಂಪ್ಲೀಟ್ ಆಗಿದ್ದು, ಒಂದಷ್ಟು ಪ್ರಿ ರಿಲೀಸ್ ಕೆಲಸಗಳನ್ನು ಮಾತ್ರ ಉಳಿಸಿಕೊಂಡಿದೆ.  ‘ಬಡವ ರಾಸ್ಕಲ್​’ನಲ್ಲೂ ರಗಡ್ ಕಥಾಹಂದರವಿದೆ ಎನ್ನಲಾಗಿದೆ.