Monday, August 3, 2026

BDA Apartments

Home Front Page ಡಿ.25ಕ್ಕೆ ನನ್ನ ರಾಜಕೀಯ ಜೀವನದ ಬಗ್ಗೆ ನಿರ್ಧಾರ- ಮಾಜಿ ಸಚಿವ ಜನಾರ್ಧನ ರೆಡ್ಡಿ.

ಡಿ.25ಕ್ಕೆ ನನ್ನ ರಾಜಕೀಯ ಜೀವನದ ಬಗ್ಗೆ ನಿರ್ಧಾರ- ಮಾಜಿ ಸಚಿವ ಜನಾರ್ಧನ ರೆಡ್ಡಿ.

ಕೊಪ್ಪಳ,ಡಿಸೆಂಬರ್,22,2022(www.justkannada.in): ಡಿಸೆಂಬರ್ 25ಕ್ಕೆ ನನ್ನ ರಾಜಕೀಯ ಜೀವನದ ಬಗ್ಗೆ ನಿರ್ಧಾರವಾಗಲಿದೆ ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ತಿಳಿಸಿದ್ದಾರೆ.

ಗಂಗಾವತಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಜನಾರ್ಧನ ರೆಡ್ಡಿ, ಡಿಸೆಂಬರ್ 25 ರಂದು ಬೆಂಗೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ಹೇಳುತ್ತೇನೆ. ಯಾರು ಏನೇ ಅಂದ್ರೂ ಅಂದೇ ನನ್ನ ರಾಜಕೀಯ ಜೀವನ ನಿರ್ಧಾರವಾಗುತ್ತದೆ . ನನ್ನ ಜೊತೆ ಯಾರು ಬರ್ತಾರೆ ಅಂತಾ ಗೊತ್ತಾಗುತ್ತದೆ ಎಂದರು.

ಜನಾರ್ಧನರೆಡ್ಡಿ ಬಿಜೆಪಿಯಲ್ಲೇ ಇರ್ತಾರೆ ಎಂಬ ಮಾಜಿ ಸಿಎಂ ಬಿಎಸ್ ವೈ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಜನಾರ್ಧನ ರೆಡ್ಡಿ, ಇನ್ನೆರೆಡು ದಿನ ಕಾಯಿರಿ ಎಲ್ಲವೂ ಗೊತ್ತಾಗುತ್ತದೆ ಎಂದರು.

Key words: Decision – my political- career – December 25-Former minister -Janardhana Reddy