ಪಂಚಮಸಾಲಿ 2ಎಗೆ ಸೇರ್ಪಡೆಯಾದ್ರೆ ಶೋಷಿತ ಸಮುದಾಯಕ್ಕೆ ಅನ್ಯಾಯ: ಪ್ರಸ್ತಾವನೆ ತಿರಸ್ಕರಿಸುವಂತೆ ಆಗ್ರಹಿಸಿ ಪ್ರತಿಭಟನೆ.

ಮೈಸೂರು,ಡಿಸೆಂಬರ್,22,2022(www.justkannada.in): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿದರೇ ಹಲವು ಶೋಷಿತ ಸಮುದಾಯಗಳು ಅವಕಾಶ ವಂಚಿತರಾಗುತ್ತಾರೆ. ಹೀಗಾಗಿ ಪಂಚಮಸಾಲಿ ಸಮುದಾಯದ ಪ್ರಸ್ತಾವನೆ ತಿರಸ್ಕರಿಸುವಂತೆ ಆಗ್ರಹಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು.

ನಗರದ ಕೋರ್ಟ್ ಮುಂಭಾಗದ ಗಾಂಧಿ ಪ್ರತಿಮೆ ಮುಂಭಾಗ ಹಿಂದುಳಿದ ವರ್ಗ ಹಾಗೂ ಕಾಯಕ ಸಮುದಾಯಗಳು  ಪ್ರತಿಭಟನೆ ನಡೆಸಿ ಸರ್ಕಾರ ಮತ್ತು ಮೀಸಲಾತಿಗೆ ಹೋರಾಟಕ್ಕಿಳಿದಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಂಚಮಸಾಲಿ ಸಮುದಾಯ 2A ಗೆ ಸೇರ್ಪಡೆಯಾದರೆ . ಹಲವು ಶೋಷಿತ ಸಮುದಾಯಗಳು ಅವಕಾಶ ವಂಚಿತರಾಗುತ್ತಾರೆ. ಸಮಾಜದಲ್ಲಿ, ಸಾಮಾಜಿಕ ಅಸಮಾನತೆ ಉಂಟಾಗುತ್ತದೆ. ಸರ್ಕಾರ ಪಂಚಮಸಾಲಿ ಸಮುದಾಯದ ಪ್ರಸ್ತಾವನೆ ತಿರಸ್ಕರಿಸಬೇಕು.ಇಲ್ಲವಾದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಸರ್ಕಾರಕ್ಕೆ ಪ್ರತಿಭಟನಾಕಾರರು ಖಡಕ್ ಎಚ್ಚರಿಕೆ ನೀಡಿದರು.

Key words: oppressed -Panchamasali -2A – Protest -mysore