ಪೊಲೀಸ್ ಠಾಣೆಯಲ್ಲಿ ಆರೋಪಿ ಸಾವು ಕೇಸ್:  ಲಾಕಪ್ ಡೆತ್ ಅಲ್ಲ- ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ.

ಮೈಸೂರು,ಮೇ,25,2024 (www.justkannada.in):  ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಆರೋಪಿ ಆದಿಲ್  ಸಾವನ್ನಪ್ಪಿದ್ದು ಲಾಕಪ್ ಡೆತ್ ನಿಂದ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ  ಸ್ಪಷ್ಟಪಡಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಚನ್ನಗಿರಿಯಲ್ಲಿ ನಡೆದಿರುವುದು ಲಾಕಪ್ ಡೆತ್ ಅಲ್ಲ, ಆರೋಪಿಗೆ ಪಿಟ್ಸ್ ಬಂದಿತ್ತು. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಪಿಟ್ಸ್ ನಿಂದಾಗಿ ಆರೋಪಿ ಮೃತಪಟ್ಟಿದ್ದಾನೆ. ಆದರೂ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.

ದಾವಣಗೆರೆ ಜಿಲ್ಲೆ ಚನ್ನಗಿರಿ ಠಾಣೆಗೆ  ಪೊಲೀಸರು ಆರೋಪಿ ಆದಿಲ್ ನನ್ನು ಕರೆತಂದ  ತಕ್ಷಣ ಕುಸಿದಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇದು ಲಾಕಪ್ ಡೆತ್ ಎಂದು ಆರೋಪಿಸಿದ  ಆದಿಲ್ ಸಂಬಂಧಿಕರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಕಲ್ಲುತೂರಾಟ  ಮಾಡಿದ್ದರು. ಇದರಿಂದ ಪೊಲೀಸರ ವಾಹನ ಜಖಂಗೊಂಡಿದ್ದವು.

Key words: death, accused, police, station, CM Siddaramaiah