ಬೆಂಗಳೂರು ಡ್ರಗ್ಸ್‌ ಪಾರ್ಟಿಗಳ ಅಡ್ಡ : ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಕಿಡಿ.

Bengaluru become drug parties Adda: Indrajit Lankesh

 

ಮೈಸೂರು, ಮೇ.25, 2024: (www.justkannada.in news)  ಬೆಂಗಳೂರಲ್ಲಿ ನಟ ನಟಿಯರಿಂದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ವಿಚಾರ . ಸ್ಯಾಂಡಲ್‌ ವುಡ್‌ ನಟ, ನಿರ್ದೇಶಕರ ಆಕ್ಷೇಪ.

ಪಾರ್ಟಿ ಮಾಡಿ ಆದ್ರೆ ಡ್ರಗ್ಸ್ ಬೇಡ. ಮೈಸೂರಿನಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಹೇಳಿಕೆ.

ನಾವು ಕೂಡ ಬೇರೆ ಕಡೆ ಹೋಗಿ ಪಾರ್ಟಿ ಮಾಡ್ತೀವಿ  ಅದೇ ರೀತಿ ಪಕ್ಕದ ರಾಜ್ಯದವರು ಬಂದು ಇಲ್ಲಿ ಪಾರ್ಟಿ ಮಾಡ್ತಾರೆ. ಪಾರ್ಟಿ ಮಾಡ್ಲಿ ಆದ್ರೆ ಡ್ರಗ್ಸ್ ಬೇಡ ತಪ್ಪು ಯಾರು ಮಾಡಿದ್ರು ತಪ್ಪೇ. ಡ್ರಗ್ ಪಾರ್ಟಿ, ರೇವ್ ಪಾರ್ಟಿಗಳು ಕೆಟ್ಟ ಬೆಳವಣಿಗೆ.

ಒಂದು ತಿಂಗಳು ಸ್ಯಾಂಡಲ್ವುಡ್  ಬಂದ್ ಮಾಡುವ ವಿಚಾರ, ಬಂದ್ ಮಾಡುವ ವಿಚಾರ ಯಾರಿಗೂ ಒಳ್ಳೇದಲ್ಲ, ಅಭಿಮಾನಿಗಳಿಗೆ ಒಳ್ಳೆಯ ಸಿನಿಮಾ ಕೊಡೋದು ನಮ್ಮ ಕರ್ತವ್ಯ. ಅದಕ್ಕಾಗಿ ಸಮಯ ಆಗ್ತಿದೆ ಅಷ್ಟೇ. ಜನರು ಕೂಡ ಎಲ್ಲಾ ಸಿನಿಮಾ ನೋಡಲ್ಲ. ಒಳ್ಳೆಯ ಕಥೆ , ಒಳ್ಳೆ ಸಿನಿಮಾ ನೋಡ್ತಾರೆ. ಹಾಗಾಗಿ ವರ್ಷಗಟ್ಟಲೆ ಸ್ಟಾರ್ ನಟರು ಸಿನಿಮಾ ಮಾಡ್ತಾರೆ.  ಅಭಿಮಾನಿಗಳಿಗೋಸ್ಕರ ಸಮಯ ಜಾಸ್ತಿ ತೆಗೆದುಕೊಂಡು ಒಳ್ಳೆಯ ಸಿನಿಮಾ ಮಾಡ್ತೀವಿ.  ಮೈಸೂರಿನಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಹೇಳಿಕೆ.

ಬೆಂಗಳೂರು ಡ್ರಗ್ಸ್ ಪಾರ್ಟಿಗಳ ಅಡ್ಡೆ ಆಗಿದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಕಿಡಿ.

ಡ್ರಗ್ಸ್ ಪಾರ್ಟಿ, ರೇವ್ ಪಾರ್ಟಿ ವಿರುದ್ಧ ಈ ಹಿಂದೆ ಕೂಡ ಧನಿ ಎತ್ತಿದೆ. ಆವಾಗ ನನ್ನನ್ನ ಹಾಸ್ಯವಾಗಿ ನೋಡಿದ್ರು. ಅದಾದ ಬಳಿಕ ದಾಳಿಗಳು ನಡೆದು ಬೆಂಗಳೂರು ಶಾಂತವಾಗಿತ್ತು. ಈಗ ಮತ್ತೊಮ್ಮೆ ಅಂತಹ ಘಟನೆ ನಡೆದಿದೆ. ನಟ – ನಟಿಯರು ಇಂತಹ ಕೃತ್ಯದಲ್ಲಿ ತೊಡಗಬಾರದು. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಡ್ರಗ್ಸ್ ಸಿಟಿ ಆಗರುವ ಬೆಂಗಳೂರಲ್ಲಿ ಇಂತಹ ಕೃತ್ಯ ನಾಚಿಕೆಗೇಡು.

key words: Bengaluru, become drug parties Adda, Indrajit Lankesh

summary: 

We Also Go Elsewhere and Party Similarly People from Neighboring States Come and Party Here. Let’s party, don’t take drugs, whoever did the wrong is wrong. Drug parties, rave parties are bad developments. lovely star prem said.