ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಬಿಗ್ ರಿಲೀಫ್: ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ.

ಬೆಂಗಳೂರು,ಏಪ್ರಿಲ್,25,2024 (www.justkannada.in): ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಆಮಿಷವೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ ಶಿವಕುಮಾರ್  ವಿರುದ್ದ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ ನೀಡಿದೆ.

ಈ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಪ್ರಕರಣ ಸಂಬಂಧ ಹೈಕೋರ್ಟ್ ನಲ್ಲಿ ವಾದ ಮಂಡಿಸಿದ ಡಿಕೆ ಶಿವಕುಮಾರ್ ಪರ ಹಿರಿಯ ವಕೀಲ ಉದಯ್ ಹೊಳ್ಳ, ಡಿಕೆ ಶಿವಕುಮಾರ್ ಅವರ ಚುನಾವಣಾ ಭಾಷಣವನ್ನು ಆಮಿಷವೆಂದು ಆರೋಪಿಸಲಾಗಿದೆ ಎಂದರು. ಡಿಕೆ  ಶಿವಕುಮಾರ್ ಪರ ವಕೀಲರ  ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚುನಾವಣಾ ಆಯೋಗದ ಪರ  ವಕೀಲರು,  ಮತದಾರರಿಗೆ ಡಿಕೆಶಿವಕುಮಾರ್ ಆಮಿಷ ಒಡ್ಡಿದ್ದಾರೆ. ನಾನು ಇಲ್ಲಿ ಬ್ಯುಸಿನೆಸ್ ಡೀಲ್ ಗೆ ಬಂದಿದ್ದೇನೆ. ನಿಮಗೆ ಹೆಚ್ಚು ಕಾವೇರಿ ನೀರು ಬೇಕೆಂದು ಕೇಳಿದ್ದೀರಿ. ನೀವು ಅಪಾರ್ಟ್ ಮೆಂಟ್ ಪಕ್ಕದ ಸಿಎ ಸೈಟ್ ಬೇಕೆಂದು ಕೇಳಿದ್ದೀರಿ.  ನೀವು ನಮಗೆ ಮತಹಾಕಿದ ಎರಡು ಮೂರು ತಿಂಗಳಲ್ಲಿ ಹಸ್ತಾಂತರಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿಕೆಯನ್ನ ವಕೀಲ ಶರತ್ ದೊಡ್ಡವಾಡ್ ಉಲ್ಲೇಖಿಸಿದರು.

ಚುನಾವಣಾ ಪ್ರಚಾರದ ಗುಣಮಟ್ಟ ಕುಸಿತಕ್ಕೆ ಕಳವಳ ವ್ಯಕ್ತಪಡಿಸಿದ ಹೈಕೋರ್ಟ್ ಭಾಷಣದ ವೇಳೆ ಇದು ಪುನರಾವರ್ತನೆಯಾಗದಂತೆ ಎಚ್ಚರವಹಿಸಿ ಎಂದು ಉದಯ್ ಹೊಳ್ಳಗೆ ಸೂಚನೆ ನೀಡಿತು.  ಮುಂದಿನ ವಿಚಾರಣೆವರೆಗೂ ಡಿಕೆ ಶಿವಕುಮಾರ್ ವಿರುದ್ದ ಬಲವಂತದ ಕ್ರಮ ಕೈಗೊಳ್ಳದಂತೆ  ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ ಆದೇಶಿಸಿತು.

Key words: DCM, DK Shivakumar, High Court, no action