ಬಿರಿಯಾನಿ ತಿನ್ಬೇಡಿ: ಪಾಕ್ ಕ್ರಿಕೆಟಿಗರಿಗೆ ಕೋಚ್ ವಾರ್ನಿಂಗ್

ಬೆಂಗಳೂರು, ಸೆಪ್ಟೆಂಬರ್ 17, 2019 (www.justkannada.in): ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮಿಸ್ಬಾ ಉಲ್ ಹಖ್ ಆಟಗಾರರಿಗೆ ಖಡಕ್ ಸೂಚನೆಯೊಂದನ್ನು ನೀಡಿದ್ದಾರೆ.

ಪಾಕ್ ಆಟಗಾರರು ಫಿಟ್ ಆಗಿರುಬೇಕು. ಹೀಗಾಗಿ ಬಿರಿಯಾನಿ ತಿನ್ನಬೇಡಿ, ಕೊಬ್ಬಿನ ಅಂಶವಿರುವ ಮಾಂಸ ಹಾಗೂ ಸಿಹಿ ಮುಟ್ಟಲೇಬೇಡಿ ಎಂದು ಆಟಗಾರರಿಗೆ ಮಿಸ್ಬಾ ವಾರ್ನಿಂಗ್ ಮಾಡಿದ್ದಾರೆ.

ಕೊಬ್ಬಿನಾಂಶ ಹೆಚ್ಚಾಗಿರುವ ಆಹಾರ ತಯಾರು ಮಾಡದಂತೆ ಆಹಾರ ಸರಬರಾಜು ಮಾಡುವ ಕಂಪೆನಿಗೂ ಮಿಸ್ಬಾ ಹೇಳಿದ್ದಾರೆ.