ಬಿಜೆಪಿ ನಿಯೋಗದಿಂದ ಕೆಆರ್ ಎಸ್ ಜಲಾಶಯ ಭೇಟಿ ಮುಂದೂಡಿಕೆ.

ಮಂಡ್ಯ,ಸೆಪ್ಟಂಬರ್,7,2023(www.justkannada.in):  ಕೆಆರ್ ಎಸ್ ಜಲಾಶಯ ಭರ್ತಿಯಾಗದೇ ನೀರಿನ ಮಟ್ಟ ಕಡಿಮೆ ಇದ್ದರೂ ಸಹ ರಾಜ್ಯ ಕಾಂಗ್ರೆಸ್ ಸರ್ಕಾರ  ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನ ವಿರೋಧಿಸಿ ರೈತ ಸಂಘಟನೆಗಳು  ಮತ್ತು ಬಿಜೆಪಿ ಪ್ರತಿಭಟನೆ ನಡೆಸಿತ್ತಿದೆ. ಈ ಮಧ್ಯೆ ನಾಳೆ ನಿಗದಿಯಾಗಿದ್ದ ಬಿಜೆಪಿ ನಿಯೋಗದ  ಕೆಆರ್ ಎಸ್ ಜಲಾಶಯದ ಭೇಟಿ ಮುಂದಿನ ವಾರಕ್ಕೆ ಮುಂದೂಡಿಕೆಯಾಗಿದೆ.

ನಾಳೆ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂದೂಡಿಕೆ ಮಾಡಲಾಗಿದೆ. ಈ ಹಿಂದೆ ಪ್ರತಿಭಟನೆಯನ್ನು ಕೂಡಾ ಎರಡು ಬಾರಿ ಮುಂದೂಡಿದ್ದ ಬಿಜೆಪಿ, ರಾಜ್ಯ ಕಾರ್ಯಕಾರಣಿ ಸಭೆಯನ್ನು ಕೂಡಾ ಮುಂದೂಡಿತ್ತು.

ಬಿಜೆಪಿ ನಾಯಕರು ನಿಯೋಗದಲ್ಲಿ ತೆರಳಿ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ವಸ್ತುಸ್ಥಿತಿ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

Key words:  BJP -delegation-KRS Reservoir -visit -postponed