ಸಾರಿಗೆ ನೌಕರರ ಹಠ ಸರಿಯಲ್ಲ: ಸರ್ಕಾರದ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ- ಡಿಸಿಎಂ ಡಿಕೆಶಿ ಮನವಿ

ಬೆಂಗಳೂರು,ಆಗಸ್ಟ್,5,2025 (www.justkannada.in):  ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಸಾರಿಗೆ ನೌಕರರ ಬೇಡಿಕೆ ತಪ್ಪಲ್ಲ. ಆದರೆ ನೌಕರರು ಹಠ ಮಾಡೋದು ಸರಿಯಲ್ಲ. ಸರ್ಕಾರದ ಪರಿಸ್ಥಿತಿಯನ್ನ ಅರ್ಥಮಾಡಿಕೊಳ್ಳಬೇಕು ಅಂತಾ ಮನವಿ ಮಾಡುತ್ತೇನೆ ಎಂದರು.

ನಾಗರೀಕರಿಗೆ ಪ್ರಾಮುಖ್ಯತೆ ಕೊಡಿ. ಸಾರ್ವಜನಿಕರ ಬದುಕು ಮುಖ್ಯ.  ಮಾಡುವಂತಹದ್ದು ಇದ್ದರೆ ಖಂಡಿತವಾಗಿ ಸಿಎಂ ಈಡೇರಿಸುತ್ತಾರೆ. ನೀವು ಕೂಡ ಸಮಾಜಸೇವೆ ಮಾಡಬೇಕು ಅಂತ ಬಂದಿರುವವರು ದಯಮಾಡಿ ಸಹಕಾರ ಕೊಡಬೇಕು ಅಂತಾ ಮನವಿ ಮಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

Key words: Transport, employees, strike, DCM DK Shivakumar