ಬೆಂಗಳೂರು,ಮೇ,22,2026 (www.justkannada.in): ರಾಜ್ಯದಲ್ಲಿ ಜೂನ್ 30ರಿಂದ ಎಸ್ ಐಆರ್ ಪ್ರಕ್ರಿಯೆ ನಡೆಯಲಿದ್ದು ಮತದಾರರ ಹಕ್ಕು ತಡೆಯಲು ಸಂಚು ಮಾಡಲಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಎಸ್ ಐಆರ್ ಗೆ ನೋಟಿಫಿಕೇಷನ್ ಬಂದಿದೆ ಪ್ರತಿಯೊಬ್ಬರೂ ಅರ್ಜಿ ಕೊಡಬೇಕಾಗಿದೆ, ದಾಖಲೆ ಕೊಡಬೇಕಾಗಿದೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಮತದಾನದ ಹಕ್ಕು ಹೋಗಿಬಿಡುತ್ತೆ ಇದನ್ನೆಲ್ಲಾ ಬೇರೆ ಬೇರೆ ರಾಜ್ಯಗಳಲ್ಲಿ ನೋಡಿದ್ದೇವೆ. ಬಡವರು ಮತದರರ ಹಕ್ಕನ್ನು ತೆಗೆಯಲು ಸಂಚು ನಡೆಯುತ್ತಿದೆ ಯಾವುದೇ ಪಾರ್ಟಿಯಾದರೂ ಮತದಾನದ ಹಕ್ಕು ಇರಬೇಕು. ಅದರಲ್ಲಿ ನಮ್ಮ ಅಭ್ಯಂತರವೇನು ಇಲ್ಲ ಎಂದರು.
ಹುಷಾರಾಗಿರಬೇಕು ಅಂತಾ ಕಾರ್ಯಕರ್ತರಿಗೆ ತಿಳಿಸಿದ್ದೇನೆ . ಒಂದು ಚೂರು ಹೆಚ್ಚು ಕಮ್ಮಿ ಆದರೂ ವೋಟ್ ಹೋಗುತ್ತೆ. ವೋಟ್ ಹೋದರೆ ಬಸ್ ಬಲ್ಲಿ ಓಡಾಡುವಾಗಿಲ್ಲ. ಐಡಿ ಕಾರ್ಡ್ ಇರಲ್ಲ ಓಲ್ಡ್ ಏಜ್ ಪೆನ್ಷನ್ ಇರಲ್ಲ. ವಿಧವಾ ವೇತನ, ಗೃಹಲಕ್ಷ್ಮಿ, ಗೃಹಜ್ಯೋತಿ ಏನೂ ಸಿಗಲ್ಲ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
Key words: SIR, process, voter rights, DCM, DK Shivakumar







