ಬೆಳಗಾವಿ, ಮೇ.೨೨,೨೦೨೬: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಬಿ.ಇ. ಹಾಗೂ ಬಿ.ಟೆಕ್ ಅಂತಿಮ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವನ್ನು ಪರೀಕ್ಷೆ ಮುಗಿದ ಕೇವಲ 10 ನಿಮಿಷಗಳಲ್ಲೇ ಪ್ರಕಟಿಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ. ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಈ ಸಾಧನೆ ದೇಶದ ಗಮನ ಸೆಳೆದಿದೆ.

ಈ ಬಾರಿ ಒಟ್ಟು 56,192 ವಿದ್ಯಾರ್ಥಿಗಳು ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ ಶೇ. 99.98ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಮುಗಿದ ತಕ್ಷಣವೇ ಫಲಿತಾಂಶ ಪ್ರಕಟವಾದುದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆಶ್ಚರ್ಯ ಮತ್ತು ಸಂತಸ ಮೂಡಿಸಿದೆ.
ಈ ಬಗ್ಗೆ ಜಸ್ಟ್ ಕನ್ನಡ ಜತೆ ಮಾತನಾಡಿದ ವಿಟಿಯು ಕುಲಪತಿ ಪ್ತೊ.ವಿದ್ಯಾಶಂಕರ್, ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಉತ್ತರಪತ್ರಿಕೆಗಳ ಮೌಲ್ಯಮಾಪನವನ್ನು ಅತ್ಯಂತ ವೇಗವಾಗಿ ಪೂರ್ಣಗೊಳಿಸಲಾಯಿತು. ಇದರಿಂದ ಮಾನವೀಯ ವಿಳಂಬ ತಪ್ಪಿಸಿ, ಪಾರದರ್ಶಕ ಹಾಗೂ ವೇಗದ ಫಲಿತಾಂಶ ಪ್ರಕಟಣೆ ಸಾಧ್ಯವಾಗಿದೆ ಎಂದರು.

ನಿನ್ನೆಯಷ್ಟೆ ಸಮಾರಂಭದಲ್ಲಿ ಮಾತನಾಡಿ, ನಾಳೆ ಬಿ.ಟೆಕ್ ಪರೀಕ್ಷೆ ಮುಗಿಯಲಿದೆ. ಅದು ಮುಗಿದ ಜಸ್ಟ್ ೧೦ ನಿಮಿಷದಲ್ಲಿ ರಿಸಲ್ಟ್ ಪ್ರಕಟಿಸುವುದಾಗಿ ಆಶ್ವಾಸನೆ ನೀಡಿದ್ದೆ. ಅದರಂತೆ ಇಂದು ಫಲಿತಾಂಶ ಪ್ರಕಟಿಸಿದ್ದೇವೆ. ಈ ವೇಳೆ ನಾನು ಖುದ್ದು ಹಾಜರಿರಲು ಬಯಸಿದ್ದೆ. ಆದರೆ ಕಾರ್ಯದೊತ್ತಡದ ಕಾರಣ ಬೆಂಗಳೂರಿಂದ ಬೆಳಗಾವಿ ತಲುವುದು ತಡವಾಯಿತು. ಹಾಗಾಗಿ ವಿವಿ ಸಿಬ್ಬಂದಿಗೆ ಫಲಿತಾಂಶ ಪ್ರಕಟಿಸುವಂತೆ ತಿಳಿಸಿದ್ದೆ ಎಂದು ” ಜಸ್ಟ್ ಕನ್ನಡ” ಗೆ ಮಾಹಿತಿ ನೀಡಿದರು.

ವಿಶೇಷವಾಗಿ, ವಿದ್ಯಾರ್ಥಿಗಳ ಫಲಿತಾಂಶವನ್ನು ನೇರವಾಗಿ ಅವರ ಮೊಬೈಲ್ ಫೋನ್‌ಗಳಿಗೆ ಕಳುಹಿಸುವ ವ್ಯವಸ್ಥೆಯನ್ನೂ ವಿಟಿಯು ಜಾರಿಗೊಳಿಸಿದೆ. ಇದರಿಂದ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ವೆಬ್‌ಸೈಟ್‌ಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ತಪ್ಪಿದೆ . ಜತೆಗೆ ಉನ್ನತ ಶಿಕ್ಷಣ ಪ್ರವೇಶ, ಕ್ಯಾಂಪಸ್ ನೇಮಕಾತಿ ಹಾಗೂ ಉದ್ಯೋಗಾವಕಾಶಗಳಿಗೆ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ತ್ವರಿತ ಕ್ರಮ ಕೈಗೊಳ್ಳಲಾಗಿದೆ ಎಂದ ಕುಲಪತಿ ಪ್ರೊ.ವಿದ್ಯಾಶಂಕರ್.
ಇದೇ ವೇಳೆ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಮಾದರಿಯನ್ನು ನಿರ್ಮಿಸಿರುವ ಬಗ್ಗೆ ಶಿಕ್ಷಣ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.
Key words: Visvesvaraya Technological University, created history, announcing B.E. and B.Tech final semester results, just 10 minutes, after the exams concluded

SUMMARY:

Visvesvaraya Technological University created history by announcing B.E. and B.Tech final semester results just 10 minutes after the exams concluded. A total of 56,192 students appeared, with an impressive 99.98% pass percentage. Using digital evaluation, VTU sent results directly to students’ mobile phones, helping them quickly apply for higher education and job opportunities.







