Friday, August 7, 2026

BDA Apartments

Home DASARA2024 ಆನೆ ನಡೆಯುವಾಗ ಅದೇನೋ ಬೀಳುತ್ತೆ ಅಂಥ ಕಾಯ್ತಿರ್ತಲ್ಲ ಹಂಗಾಯ್ತು ವಿಪಕ್ಷದ ಸ್ಥಿತಿ : ಡಾ. ಎಚ್.ಸಿ.ಮಹಾದೇವಪ್ಪ...

ಆನೆ ನಡೆಯುವಾಗ ಅದೇನೋ ಬೀಳುತ್ತೆ ಅಂಥ ಕಾಯ್ತಿರ್ತಲ್ಲ ಹಂಗಾಯ್ತು ವಿಪಕ್ಷದ ಸ್ಥಿತಿ : ಡಾ. ಎಚ್.ಸಿ.ಮಹಾದೇವಪ್ಪ ವ್ಯಂಗ್ಯ

Mysore, dasara2024, gajapayana, mahadevappa

 

ಮೈಸೂರು, ಆ.21,2024: (www.justkannada.in news) ಆನೆ ಹೋಗುತ್ತಿರುತ್ತೆ, ನರಿಯೊಂದು ಕಾದು ಕುತಿರುತ್ತೆ. ಅದೇನ್ನೋ ಬೀಳುತ್ತೆ ಅಂಥ ಕಾಯ್ತಿರುತ್ತೇ. ಅದು ಬೀಳುವುದಿಲ್ಲ, ಆನೆ ನಡೆಯುವುದನ್ನ ನಿಲ್ಲಿಸುವುದಿಲ್ಲ. ಗ್ರಾಮೀಣ ಭಾಗದ ಜನರು ಬಳಸುವ ಆಡುಭಾಷೆಯ ಉದಾಹರಣೆ ನೀಡುವ ಮೂಲಕ ವಿರೋಧ ಪಕ್ಷಗಳಿಗೆ ಟಾಂಗ್ ಕೊಟ್ಟ ಸಚಿವ ಡಾ.ಎಚ್.ಸಿ ಮಹದೇವಪ್ಪ.

ಸರ್ಕಾರಕ್ಕೆ ಯಾಕ್ರಿ ಸಮಸ್ಯೆ. ಸರ್ಕಾರ ಯಾಕೆ ಅಭದ್ರ ಆಗುತ್ತೆ. ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತೆ‌.  7 ಕೋಟಿ ಜನ ಮತ ಹಾಕಿ ಬಂದಿರುವ ಸರ್ಕಾರ. ಇದನ್ಮ ಅಸ್ಥಿರವಾಗಿಸಲು ಹೇಗೆ ಸಾಧ್ಯ. ನಮ್ಮಲ್ಲಿ ಯಾವ ಬೆಳವಣಿಗೆ ನಡೆಯುತ್ತಿಲ್ಲ. ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ತಪ್ಪೇನಿದೆ ಹೇಳಿ.

5 ವರ್ಷ ಸಿದ್ದರಾಮಯ್ಯ ಸಿಎಂ ಆಗಿರ್ತಾರಾ..? ಎಂಬ ಪ್ರಶ್ನೆಗೆ ನಿಮಗ್ಯಾಕೆ ಈ ಅನುಮಾನ ಎಂದು ಮರು ಪ್ರಶ್ನಿಸಿದ ಡಾ.ಎಚ್.ಸಿ ಮಹದೇವಪ್ಪ. ಮುಡಾ ಪ್ರಕರಣ ದಸರಾದ ಮೇಲೆ ಯಾವ ಪರಿಣಾಮ ಬೀರಲ್ಲ. ಈ ಬಾರಿ ವಿಜೃಂಭಣೆಯಿಂದ ದಸರಾ ಮಾಡುತ್ತೇವೆ. ಮೈಸೂರಿನಲ್ಲಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಹೇಳಿಕೆ.

key words: Mysore, dasara2024, gajapayana, mahadevappa