Monday, October 12, 2026

Dasara Wishes

ನಟ ದರ್ಶನ್ ಗೆ ಜೈಲೇ ಗತಿ: ಮತ್ತೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ DasraWishes_JK DasraWishes JK
Happy Dasara
Home Cinema ಲಾಕ್ ಡೌನ್ ಉಲ್ಲಂಘಿಸಿ ಚಾಮುಂಡಿಬೆಟ್ಟದಲ್ಲಿ ಪೂಜೆ: ದರ್ಶನ್, ಶೋಭಾ ಕರಂದ್ಲಾಜೆ ವಿರುದ್ಧ ಹೈಕೋರ್ಟ್’ನಲ್ಲಿ ದಾವೆ

ಲಾಕ್ ಡೌನ್ ಉಲ್ಲಂಘಿಸಿ ಚಾಮುಂಡಿಬೆಟ್ಟದಲ್ಲಿ ಪೂಜೆ: ದರ್ಶನ್, ಶೋಭಾ ಕರಂದ್ಲಾಜೆ ವಿರುದ್ಧ ಹೈಕೋರ್ಟ್’ನಲ್ಲಿ ದಾವೆ

ಬೆಂಗಳೂರು, ಜುಲೈ 23, 2020 (www.justkannada.in): ನಟ ದರ್ಶನ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ವಕೀಲರೊಬ್ಬರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಕೊನೆಯ ಆಷಾಢ ಶುಕ್ರವಾರದ ದಿನ ನಟ ದರ್ಶನ್, ಸಂಸದೆ ಶೋಭಾ ಕರಂದ್ಲಾಜೆ, ಭಾಗ್ಯ ಮಹೇಶ್ ಹಾಗೂ ಅವರ ಬೆಂಬಲಿಗರು ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಿದ್ದರು.

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಮಾರ್ಗಸೂಚಿ ಉಲ್ಲಂಘನೆ ಮಾಡಿರುವುದು ಸರಿಯಲ್ಲ ಎಂದು ವಕೀಲೆ ಗೀತಾಮಿಶ್ರಾ ಹೈಕೋರ್ಟ್ ಹೆಚ್ಚುವರಿ ರಿಜಿಸ್ಟರ್ಗೆ ಜ್ಞಾನಪನ ಪತ್ರ ಸಲ್ಲಿಸಿದ್ದಾರೆ. ಜೊತೆಗೆ ಕೊವೀಡ್ 19 ಮಾರ್ಗಸೂಚಿಗಳ ಉಲ್ಲಂಘನೆ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಹ ಹಾಕಿದ್ದಾರೆ.