Friday, October 16, 2026

Dasara Wishes

Happy Dasara
Home Front Page ರೈತರೊಂದಿಗೊಂದು ದಿನ: ಬಿ.ಸಿ.ಪಾಟೀಲ್’ಗೆ ಕೃಷಿ ಇಲಾಖೆ ರಾಯಭಾರಿ ನಟ ದರ್ಶನ್ ಸಾಥ್ !

ರೈತರೊಂದಿಗೊಂದು ದಿನ: ಬಿ.ಸಿ.ಪಾಟೀಲ್’ಗೆ ಕೃಷಿ ಇಲಾಖೆ ರಾಯಭಾರಿ ನಟ ದರ್ಶನ್ ಸಾಥ್ !

ಬೆಂಗಳೂರು, ನವೆಂಬರ್ 14, 2021 (www.justkannada.in): ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ನಟ, ಕೃಷಿ ಇಲಾಖೆ ರಾಯಭಾರಿ ದರ್ಶನ್ ಪಾಲ್ಗೊಂಡಿದ್ದಾರೆ.

ದರ್ಶನ್‌‌ರನ್ನು ಚಿನ್ನಮುಲಗುಂಡದಲ್ಲಿ ಬರಮಾಡಿಕೊಂಡ ಬಿ.ಸಿ.ಪಾಟೀಲ್ ಹಾಗೂ ಬೆಂಬಲಿಗರು ಭರ್ಜರಿ ಸ್ವಾಗತ ಕೋರಿದರು. ರೈತರೇ ರೈತರೊಂದಿಗೊಂದು ದಿನವನ್ನು ಆಚರಿಸುತ್ತಿದ್ದಾರೆ. ಸಾವಿರಾರು ಜನಸ್ತೋಮದ ನಡುವೆ ಟ್ರ್ಯಾಕ್ಟರ್ ಏರಿ ರೈತರ ತಾಕುಗಳತ್ತ ನಡೆದ ಬಿ.ಸಿ.ಪಾಟೀಲ್ ಅವರಿಗೆ ನಟ ದರ್ಶನ್ ಸಾಥ್ ನೀಡಿದರು.

ರೈತರೊಂದಿಗೊಂದು ದಿನದಲ್ಲಿ ಜೋಳ ರಾಗಿ ಬೀಸಿ ಬಿ.ಸಿ.ಪಾಟೀಲ್ ಹಾಗೂ ದರ್ಶನ್ ಅವರನ್ನು ವೇದಿಕೆಯಲ್ಲಿ ನೂರಾರು ಮಹಿಳೆಯರು ಸ್ವಾಗತಿಸಿದರು.

ದೇಶದಲ್ಲಿ ಅನ್ನ ಕೊಡಲು ಸಾಧ್ಯವೆಂದರೆ ಅದು ರೈತರಿಂದ ಮಾತ್ರ ಸಾಧ್ಯ.ಯಾವುದೇ ಸಿರಿವಂತರಿಂದಲೂ ಅನ್ನ ನೀಡಲು ಸಾಧ್ಯವಿಲ್ಲ.ಅನ್ನ ನೀಡಲು ಅನ್ನದಾತನೇ ಬೇಕು.ಅನ್ನದಾತನೇ ನಮ್ಮ‌ದೈವ ಎಂದು ಬಿ.ಸಿ.ಪಾಟೀಲ್ ಹೇಳಿದರು.