ಬೆಂಗಳೂರು,ಅಕ್ಟೋಬರ್,16,2026 (www.justkannada.in) ಕಾಂಗ್ರೆಸ್ ಸಿಜೆಪಿ ಒಂದೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ ಸಿಜೆಪಿ ಕಾಂಗ್ರೆಸ್ ಒಂದೇ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕಾಕ್ರೋಚ್ಜನತಾ ಪಾರ್ಟಿಗೆ ಫಂಡ್ ಮಾಡುತ್ತಿರುವುದು ಕಾಂಗ್ರೆಸ್. ಕರ್ನಾಟಕದ ಹಣ ಲೂಟಿ ಹೊಡೆದು ದೆಹಲಿಗೆ ಕೊಡುತ್ತಿದ್ದಾರೆ. ಯಾರು ಹೆದರಬೇಡಿ ಎಂಧು ಪ್ರಿಯಾಂಕ್ ಖರ್ಗೆ ಹೇಳಿಕೆ ಬೇರೆ ಕೊಡ್ತಾರೆ ಎಂದು ಕಿಡಿಕಾರಿದರು.
ಸ್ಟಿಂಗ್ ಆಪರೇಷನ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್ ಡಿ ಕುಮಾರಸ್ವಾಮಿ, ನನ್ನನ್ನೂ ತನಿಖೆ ಮಾಡಿ ಎಂದು ನಿನ್ನೆ ನಾನೇ ಕಮಿಷನರ್ ಕಚೇರಿಗೆ ಹೋಗಿದ್ದೆ ಹುಡುಗರನ್ನ ಕರೆದೊಯ್ದು ಬೇರೆಡೆ ತಿರುಗಿಸಲು ಯತ್ನಿಸುತ್ತಿದ್ದಾರೆ. ಹಾಗಾಗಿ ನಾನು ಹೆಚ್ ಡಿ ರೇವಣ್ಣ ಅಲ್ಲ ಅಂತಾ ಹೇಳಿದ್ದು ಪ್ರಾಮಾಣಿಕ ತನಿಖೆಗೆ ನಾವು ಸಹಕರಿಸುತ್ತೇವೆ. ಆದರೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠೀಣ ಕ್ರಮ ಆಗಬೇಕೆಂದು ಹೇಳುತ್ತೇನೆ ಎಂದರು.
10 ದಿನ ಆದ ಮೇಲೆ ಸಿದ್ದರಾಮಯ್ಯರನ್ನ ಸಿಎಂ ಭೇಟಿ ಮಾಡಿದಾರೆ. ಕ್ಷಮೆ ಕೇಳಿದ್ದಾರೋ ಮಾತುಕತೆ ವಿಫಲ ಆಯ್ತೋ ಗೊತ್ತಾಗಲಿದೆ. ನಿಜವಾದ ಆರೋಪಿಯನ್ನ ಬಂಧಿಸುವಂತೆ ಕಮಿಷನರ್ ಗೆ ಹೇಳಿದ್ದೇನೆ ಎಂದರು.






