Friday, October 16, 2026

Dasara Wishes

Happy Dasara
Home Crime ಬಸ್‌‍-ಲಾರಿ ನಡುವೆ ಭೀಕರ ಅಪಘಾತ: ನಾಲ್ವರ ದುರ್ಮರಣ

ಬಸ್‌‍-ಲಾರಿ ನಡುವೆ ಭೀಕರ ಅಪಘಾತ: ನಾಲ್ವರ ದುರ್ಮರಣ

ಬಸ್‌‍-ಲಾರಿ ನಡುವೆ ಭೀಕರ ಅಪಘಾತ: ನಾಲ್ವರ ದುರ್ಮರಣ

ಮೈಸೂರು,ಅಕ್ಟೋಬರ್‌,16,2026 (www.justkannada.in): ಸ್ಲೀಪರ್‌ಕೋಚ್‌ ಬಸ್‌‍ ಹಾಗೂ  ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಾಗಿ ಸಂಭವಿಸಿದ  ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಕೀರನಹಳ್ಳಿ ಗೇಟ್‌ ಬಳಿ ನಡೆದಿದೆ.

ಬಸ್‌‍ ಚಾಲಕ ಸುನೀಲ್‌ ಹಾಗೂ ಕ್ಲೀನರ್‌ ಸಗೇಶ್‌ (36) ಮತ್ತು ಕೇರಳ ಮೂಲದ ಪ್ರಯಾಣಿಕ ಅಫ್ತಾಬ್‌ ಮೃತಪಟ್ಟವರು ಎಂದು ಗುರುತಿಸಲಾಗಿದೆ.  ಮತ್ತೊಬ್ಬ ಪ್ರಯಾಣಿಕನ ಹೆಸರು ಸದ್ಯಕ್ಕೆ ತಿಳಿದು ಬಂದಿಲ್ಲ. ಇಂದು ಮುಂಜಾನೆ 3.30 ರ ಸುಮಾರಿನಲ್ಲಿ ಈ ಘಟನೆ ಸಂಭವಿಸಿದೆ.ಬಸ್‌‍-ಲಾರಿ ನಡುವೆ ಭೀಕರ ಅಪಘಾತ: ನಾಲ್ವರ ದುರ್ಮರಣ

ರಾತ್ರಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ರಸ್ತೆ ನಡುವೆ ಮರ ಬಿದ್ದಿತ್ತು.  ಲಾರಿ ಚಾಲಕ ಅಲ್ಲಿಗೆ ಬಂದಾಗ ಮರ ಬಿದ್ದಿರುವುದು ಗಮನಿಸಿ ನಿಧಾನವಾಗಿ ಲಾರಿಯನ್ನು ಪಕ್ಕಕ್ಕೆ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಅತೀ ವೇಗವಾಗಿ ಬರುತ್ತಿದ್ದ ಖಾಸಗಿ ಸ್ಲೀಪರ್‌ಕೋಚ್‌ ಬಸ್‌‍ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್‌‍ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಚಾಲಕ, ಕ್ಲೀನರ್‌ ಹಾಗೂ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟರೇ 20ಮಂದಿಗೆ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.  ಸ್ಥಳಕ್ಕೆ ಪಿರಿಯಾಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Terrible accident, between, bus ,lorry, Four dead, Mysore

English Summary
Title

Tragic Mysuru Bus Accident: 4 Killed, 31 Injured in Periyapatna Collision

Short Description
A horrific head-on Mysuru bus accident near Periyapatna has left four people dead and over 30 others injured. In the early hours of Friday, October 16, 2026, a private AC sleeper bus operated by Kaveri Travels collided with a goods lorry near Keeranahalli Gate on the Bengaluru-Kozhikode route. The severe impact killed the bus driver, conductor, and two passengers instantly. Emergency services rushed the injured victims to local government hospitals in Mysuru, Hunsur, and Periyapatna. Police have launched an investigation into the fatal crash.
Keywords
Terrible accident, between, bus, lorry, Four dead, Mysore