ಟಿ-20 ಕ್ರಿಕೆಟ್ ವಿಶ್ವಕಪ್: ಇಂದು ನ್ಯೂಜಿಲೆಂಡ್-ಆಸ್ಟ್ರೇಲಿಯಾ ಫೈನಲ್ ಫೈಟ್

ಬೆಂಗಳೂರು, ನವೆಂಬರ್ 14, 2021 (www.justkannada.in): ನ್ಯೂಜಿಲೆಂಡ್- ಆಸ್ಟ್ರೇಲಿಯಾದ ತಂಡಗಳು ಮೊದಲ ಬಾರಿಗೆ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್ ಪಟ್ಟಕ್ಕಾಗಿ ಪೈಪೋಟಿ ನಡೆಸಲಿವೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿಯೇ ನ್ಯೂಜಿಲೆಂಡ್ ಮೊದಲ ಸಲ ಮತ್ತು ಆಸ್ಟ್ರೇಲಿಯಾ ಎರಡನೇ ಸಲ ಫೈನಲ್ ಹಂತಕ್ಕೆ ತಲುಪಿವೆ. 2016ರ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಅದರಲ್ಲಿ ನ್ಯೂಜಿಲೆಂಡ್ ಗೆದ್ದಿತ್ತು.

ಕೂಲ್ ಕ್ಯಾಪ್ಟನ್ ಖ್ಯಾತಿಯ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮತ್ತು ಸ್ಪೋಟಕ ಶೈಲಿಯ ಬ್ಯಾಟರ್ ಆಯರನ್ ಫಿಂಚ್‌ ಅವರಿಬ್ಬರೂ ಇತಿಹಾಸ ನಿರ್ಮಿಸುವ ಛಲದಲ್ಲಿದ್ದಾರೆ.

ದುಬೈನಲ್ಲಿ ನಡೆದ ಪಂದ್ಯಗಳ ಜಯದಲ್ಲಿ ಟಾಸ್ ಜಯವೇ ಪ್ರಮುಖ ಪಾತ್ರ ವಹಿಸಿದೆ. ಎರಡನೇ ಇನಿಂಗ್ಸ್‌ ಬೌಲಿಂಗ್ ಮಾಡುವಾಗ ರಾತ್ರಿ ಸುರಿಯುವ ಇಬ್ಬನಿಯ ಸವಾಲು ಇರುತ್ತದೆ. ಆದ್ದರಿಂದ ಟಾಸ್ ಗೆದ್ದವರು ಮೊದಲಿಗೆ ಬೌಲಿಂಗ್ ಆರಿಸಿಕೊಂಡಿದ್ದೇ ಹೆಚ್ಚು.