Friday, August 14, 2026

BDA Apartments

Home Front Page ಕಂಬಳದಲ್ಲೀಗ ಮತ್ತೊಬ್ಬ ಉಸೇನ್ ಬೋಲ್ಟ್: ಶ್ರೀನಿವಾಸ್ ಗೌಡ ದಾಖಲೆ ಮುರಿದ ನಿಶಾಂತ್ ಶೆಟ್ಟಿ…

ಕಂಬಳದಲ್ಲೀಗ ಮತ್ತೊಬ್ಬ ಉಸೇನ್ ಬೋಲ್ಟ್: ಶ್ರೀನಿವಾಸ್ ಗೌಡ ದಾಖಲೆ ಮುರಿದ ನಿಶಾಂತ್ ಶೆಟ್ಟಿ…

ದಕ್ಷಿಣ ಕನ್ನಡ,ಫೆ,18,2020(www.justkannada.in):  ಕಂಬಳ ಅಖಾಡದಲ್ಲಿ ಹೊಸ ಹೊಸ ದಾಖಲೆಗಳ ನಿರ್ಮಾಣವಾಗುತ್ತಿದ್ದು, ಕಂಬಳ ಓಟದಲ್ಲಿ ಶ್ರೀನಿವಾಸ್ ಗೌಡ ವೇಗವಾಗಿ ಓಡಿ ಕರ್ನಾಟಕದ ಉಸೇನ್ ಬೋಲ್ಟ್ ಎಂತಲೇ ಕರೆಸಿಕೊಂಡಿದ್ದಾರೆ. ಇದೀಗ ಮತ್ತೊಬ್ಬ ಕಂಬಳ ಕಲಿ ಶ್ರೀನಿವಾಸ್ ಗೌಡ ಅವರನ್ನ ದಾಖಲೆಯನ್ನ ಸರಿಗಟ್ಟಿದ್ದಾರೆ.

ಕರಾವಳಿ ನೆಲದಲ್ಲಿ ಮತ್ತೊಬ್ಬ ಹೊಸ ಉಸೇನ್ ಬೋಲ್ಟ್ ಉದಯವಾಗಿದ್ದಾರೆ. 16 ದಿನದಲ್ಲೇ ಶ್ರೀನಿವಾಸ ಗೌಡರ ದಾಖಲೆಯನ್ನು  ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಬಜಗೋಳಿ ನಿವಾಸಿ ನಿಶಾಂತ್ ಶೆಟ್ಟಿ ಎಂಬವರು ಮುರಿದಿದ್ದಾರೆ.

ವೇಣೂರಿನಲ್ಲಿ ನಡೆದ ಕಂಬಳದಲ್ಲಿ ನಿಶಾಂತ್ ಶೆಟ್ಟಿ ಈ ಸಾಧನೆ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ವೇಣೂರಿನಲ್ಲಿ ನಡೆದ ಕಂಬಳದಲ್ಲಿ ನಿಶಾಂತ್ ಶೆಟ್ಟಿ 13.61 ಸೆಕೆಂಡ್ನಲ್ಲಿ 143 ಮೀಟರ್ ಕ್ರಮಿಸಿ ಹೊಸ ದಾಖಲೆ ಬರೆದಿದ್ದಾರೆ. ಶ್ರೀನಿವಾಸ್ ಗೌಡ 13.62 ಸೆಕೆಂಡ್ ನಲ್ಲಿ ಶ್ರೀನಿವಾಸಗೌಡ 142.5 ಮೀಟರ್ ಕ್ರಮಿಸಿದ್ದರು. ಇದೀಗ ಈ ದಾಖಲೆಯನ್ನ ಸರಿಗಟ್ಟಿದ್ದಾರೆ.

Key words: dakshina kannada-kambala- Usain Bolt-shrinivas gowda-record-break- nishanth shetty