ಮಾಯಬಜಾರ್ ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ…

ಬೆಂಗಳೂರು,ಫೆ,18,(www.justkannada.in): ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಹೋಂ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಎರಡನೇ ಸಿನಿಮಾ ಮಾಯಾಬಜಾರ್  ಟ್ರೈಲರ್ ಲಾಂಚ್ ಆಗಿದೆ.

ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡಿರುವ ಈ ಸಿನಿಮಾ ನೋಟು ಅಮಾನ್ಯೀಕರಣದ ಸುತ್ತ ಹೆಣೆಯಲಾದ ಕತೆ ಎಂಬ ಅಂಶವನ್ನು ಹೊರಹಾಕಿದೆ. ನಿನ್ನೆ ಸಂಜೆ 6 ಗಂಟೆಗೆ ಶಿವರಾಜ್ ಕುಮಾರ್ ಈ  ಟ್ರೈಲರ್ ಲಾಂಚ್ ಮಾಡಿದ್ದಾರೆ.

ಈ ಸಿನಿಮಾ ಇದೇ ತಿಂಗಳು 28 ರಂದು ತೆರೆಗೆ ಬರಲಿದ್ದು, ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಸಿನಿಮಾ ಇದಾಗಿದ್ದು ವಸಿಷ್ಠ ಸಿಂಹ, ರಾಜ್ ಬಿ ಶೆಟ್ಟಿ, ಚೈತ್ರಾ ರಾವ್, ಪ್ರಕಾಶ್ ರಾಜ್, ಸುಧಾರಾಣಿ ಮುಂತಾದವರ ತಾರಾಬಳಗವಿದೆ.