ಪೊಲೀಸ್ ಪೇದೆ ಮೇಲೆ ನಟ ದರ್ಶನ್ ಅಭಿಮಾನಿಗಳಿಂದ ಹಲ್ಲೆ….

 

ಬೆಂಗಳೂರು,ಫೆ,18(www.justkannada.in): ನಟ ದರ್ಶನ್ ಹುಟ್ಟುಹಬ್ಬದ ಆಚರಣೆ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸ್ ಪೇದೆ ಮೇಲೆ ದರ್ಶನ್ ಅಭಿಮಾನಿಗಳು ಹಲ್ಲೆ ನಡೆಸಿದ್ದಾರೆ.

ರಾಜರಾಜೇಶ್ವರಿ ನಗರದ ಐಡಿಯಲ್ ಹೋಂ ಲೇಔಟ್ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಒಬ್ಬರ ಮೇಲೆ ದರ್ಶನ್ ಅವರ ಅಭಿಮಾನಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಜ್ಞಾನಭಾರತಿ ಠಾಣೆ ಕಾನ್ ಸ್ಟೇಬರ್ ದೇವರಾಜ್ ಅವರ ಮೇಲೆ ಹಲ್ಲೆ ನಡೆದಿದೆ.

ದರ್ಶನ್ ಹುಟ್ಟುಹಬ್ಬ ಸಂಭ್ರಮಾಚರಣೆ ವೇಳೆ ಸ್ಥಳದಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಈ ವೇಳೆ ಸಾಲಿನಲ್ಲಿ ಹೋಗುವಂತೆ ದೇವರಾಜ್ ಅವರು ತಿಳಿಸಿದ್ದಾರೆ. ಇದಕ್ಕೆ ಕೆಲ ಅಭಿಮಾನಿಗಳು ಕೆಂಡಾಮಂಡಲಗೊಂಡಿದ್ದಾರೆ. ಅಲ್ಲದೆ ಪೇದೆ ದೇವರಾಜ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.