Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ತಮ್ಮ ನಿವಾಸದಲ್ಲಿ ಯಾವುದೇ ಶಾಸಕರ ಸಭೆ ನಡೆದಿಲ್ಲ-ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟನೆ…

ತಮ್ಮ ನಿವಾಸದಲ್ಲಿ ಯಾವುದೇ ಶಾಸಕರ ಸಭೆ ನಡೆದಿಲ್ಲ-ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟನೆ…

ಬೆಂಗಳೂರು,ಫೆ,18,2020(www.justkannada.in):  ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರ ನಿವಾಸದಲ್ಲಿ ಭಿನ್ನಮತೀಯ ಶಾಸಕರ ಸಭೆ ನಡೆದಿದೆ ಎಂಬ ಸುದ್ದಿಯಾದ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಜಗದೀಶ್ ಶೆಟ್ಟರ್ ನಮ್ಮ ಮನೆಯಲ್ಲಿ ಯಾವುದೇ ಸಭೆ ನಡೆದಿಲ್ಲ ಎಂದಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿಯಾದ ಸಚಿವ ಜಗದೀಶ್ ಶೆಟ್ಟರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ನಿವಾಸದಲ್ಲಿ ಯಾವುದೇ ರಾಜಕೀಯ ವಿಚಾರದ ಚರ್ಚೆ ನಡೆದಿಲ್ಲ. ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚಿಸಲು ಶಾಸಕರು ಬಂದಿದ್ದರು ಎಂದು ತಿಳಿಸಿದ್ದಾರೆ. ಅಲ್ಲದೇ, ಸಭೆ ಬಗ್ಗೆ ತಪ್ಪು ಮಾಹಿತಿ ನೀಡಿ ಗೊಂದಲ ಮೂಡಿಸಿದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಬಳಿಕ ಮಾತನಾಡಿರುವ ಸಚಿವ ಜಗದೀಶ್ ಶೆಟ್ಟರ್, ನಮ್ಮ ನಿವಾಸದಲ್ಲಿ ಯಾವುದೇ ಸಭೆ ನಡೆದಿಲ್ಲ. ಮನೆಗೆ ಸಾಕಷ್ಟು ಶಾಸಕರು ಬಂದು ಹೋಗುತ್ತಾರೆ. ಅವರನ್ನ ಬೇಡ ಎನ್ನಲು ಆಗುತ್ತಾ ಹಾಗೆಯೇ ಶಾಸಕರು ಕ್ಷೇತ್ರದ ಅಭಿವೃದ್ದಿ  ಬಗ್ಗೆ ಚರ್ಚಿಸುತ್ತಾರೆ  ಎಂದು ಹೇಳಿದರು.

Key words: no meeting – ಂಳಾ-residence-Minister -Jagdish Shetter -clarified.