Monday, September 28, 2026

BDA Apartments

ಉಪಚುನಾವಣೆಯಲ್ಲಿ ಗೆಲುವು ಹಿನ್ನೆಲೆ: ಸಿಎಂ ಬಿಎಸ್ ವೈ ಭೇಟಿಯಾಗಿ ಧನ್ಯವಾದ ಸಲ...
Home Front Page ಉಪಚುನಾವಣೆಯಲ್ಲಿ ಗೆಲುವು ಹಿನ್ನೆಲೆ: ಸಿಎಂ ಬಿಎಸ್ ವೈ ಭೇಟಿಯಾಗಿ ಧನ್ಯವಾದ ಸಲ್ಲಿಸಿದ ಡಿಸಿಎಂ ಲಕ್ಷ್ಮಣ್ ಸವದಿ…

ಉಪಚುನಾವಣೆಯಲ್ಲಿ ಗೆಲುವು ಹಿನ್ನೆಲೆ: ಸಿಎಂ ಬಿಎಸ್ ವೈ ಭೇಟಿಯಾಗಿ ಧನ್ಯವಾದ ಸಲ್ಲಿಸಿದ ಡಿಸಿಎಂ ಲಕ್ಷ್ಮಣ್ ಸವದಿ…

 

ಬೆಂಗಳೂರು,ಫೆ,18,2020(www.justkannada.in):  ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಡಿಸಿಎಂ ಲಕ್ಷ್ಮಣ್ ಸವದಿ ಧನ್ಯವಾದ ಸಲ್ಲಿಸಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ಆಗಮಿಸಿದ ಡಿಸಿಎಂ ಲಕ್ಷ್ಮಣ್ ಸವದಿ ಸಿಎಂ ಬಿ.ಎಸ್ ಯಡಿಯೂರಪ್ಪಗೆ ಧನ್ಯವಾದ ಅರ್ಪಿಸಿದರು.  ರಿಜ್ವಾನ್ ಅರ್ಷಾದ್ ರಿಂದ ತೆರವಾದ  ವಿಧಾನಪರಿಷತ್ ಒಂದು ಸ್ಥಾನಕ್ಕೆ ನಿನ್ನೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ 113 ಮತಗಳನ್ನ ಪಡೆದು ಡಿಸಿಎಂ ಲಕ್ಷ್ಮಣ್ ಸವದಿ ಗೆಲುವು ಸಾಧಿಸಿದ್ದರು.

ಪರಿಷತ್ ಚುನಾವಣೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಹಾಕಿರಲಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನಿಲ್ ಕುಮಾರ್ ಕಣದಿಂದ ಹಿಂದೆ ಸರಿದಿದ್ದರು. ಹೀಗಾಗಿ ನಿನ್ನೆ ಚುನಾವಣೆಯಲ್ಲಿ ಚಲಾವಣೆಯಾದ 120 ಮತಗಳ ಪೈಕಿ 113 ಮತಗಳನ್ನ ಪಡೆದು ಪರಿಷತ್ ಸದಸ್ಯರಾಗಿ ಲಕ್ಷ್ಮಣ್ ಸವದಿ ಆಯ್ಕೆಯಾದರು.

Key words: won- legislative council-dcm- lakshman savdi- thank –cm bs yeddyurappa