Sunday, September 20, 2026

BDA Apartments

ಕ್ರಿಕೆಟ್: ನಾಳೆ ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ-20 ಪಂದ್ಯ BDA JK_Adv BDA Adv
Home Front Page ಕ್ರಿಕೆಟ್: ನಾಳೆ ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ-20 ಪಂದ್ಯ

ಕ್ರಿಕೆಟ್: ನಾಳೆ ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ-20 ಪಂದ್ಯ

ಬೆಂಗಳೂರು, ಅಕ್ಟೋಬರ್ 01, 2022 (www.justkannada.in): ಭಾರತ – ಸೌತ್ ಆಫ್ರಿಕಾ ನಡುವಣ 2ನೇ ಟಿ20 ಪಂದ್ಯವು ನಾಳೆ (ಅಕ್ಟೋಬರ್ 2) ಗೌಹಾಟಿಯಲ್ಲಿ ನಡೆಯಲಿದೆ.

3 ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿ 8 ವಿಕೆಟ್​ಗಳಿಂದ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿ ವಿಶ‍್ವಾಸದಲ್ಲಿದೆ.

ಭಾನುವಾರದ ಪಂದ್ಯದಲ್ಲಿ ಆರಂಭಿಕರಾಗಿ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ,  ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಆಡಲಿದ್ದಾರೆ.

ಈ ಪಂದ್ಯವು ಸೌತ್ ಆಫ್ರಿಕಾ ಪಾಲಿಗೆ ನಿರ್ಣಾಯಕವಾಗಿದೆ. ಈ ಪಂದ್ಯದಲ್ಲಿ ಭಾರತ ತಂಡವು ಜಯ ಸಾಧಿಸಿದರೆ ಸರಣಿ ಟೀಮ್ ಇಂಡಿಯಾ ಪಾಲಾಗಲಿದೆ.

ಸಂಭಾವ್ಯ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ.

  1. ರೋಹಿತ್ ಶರ್ಮಾ
  2. ಕೆಎಲ್ ರಾಹುಲ್
  3. ವಿರಾಟ್ ಕೊಹ್ಲಿ
  4. ಸೂರ್ಯಕುಮಾರ್ ಯಾದವ್
  5. ರಿಷಭ್ ಪಂತ್
  6. ದಿನೇಶ್ ಕಾರ್ತಿಕ್
  7. ಅಕ್ಷರ್ ಪಟೇಲ್
  8. ರವಿಚಂದ್ರನ್ ಅಶ್ವಿನ್
  9. ಅರ್ಷದೀಪ್ ಸಿಂಗ್
  10. ಹರ್ಷಲ್ ಪಟೇಲ್
  11. ಭುವನೇಶ್ವರ್ ಕುಮಾರ್