ನಾಡಿದ್ದು (ಅ.3) ‘ದಿಲ್ ಪಸಂದ್’ ಟೀಸರ್ ರಿಲೀಸ್

ಬೆಂಗಳೂರು, ಅಕ್ಟೋಬರ್ 01, 2022 (www.justkannada.in): ಡಾರ್ಲಿಂಗ್ ಕೃಷ್ಣ ಅಭಿನಯದ ಬಹುನಿರೀಕ್ಷಿತ ‘ದಿಲ್ ಪಸಂದ್’ ಚಿತ್ರ ನವೆಂಬರ್ 11ರಂದು ರಿಲೀಸ್ ಆಗಲಿದೆ.

ಇದಕ್ಕೂ ಮುನ್ನ ಚಿತ್ರತಂಡ ಮತ್ತೊಂದು ವಿಷಯ ಪ್ರಕಟಿಸಿದೆ. ಚಿತ್ರ ಬಿಡುಗಡೆಗೂ ಮುನ್ನ ಮತ್ತೊಂದು ಟೀಸರ್ ರಿಲೀಸ್ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ.

ಅಕ್ಟೋಬರ್ 3ರಂದು ಸಂಜೆ 6ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ಈ ಟೀಸರ್ ಬಿಡುಗಡೆಯಾಗಲಿದೆ.

ರೊಮ್ಯಾಂಟಿಕ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಚಿತ್ರವನ್ನು ರಶ್ಮಿ ಫಿಲ್ಮ್ಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ ನಿರ್ಮಾಣ ಮಾಡಿದ್ದು, ಡಾರ್ಲಿಂಗ್ ಕೃಷ್ಣ ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಹಾಗೂ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ.